ಕಾಸರಗೋಡು: ಕೇರಳ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ವರ್ಷದ ಮೂರನೇ ಅದಾಲತ್ ಕಾಸರಗೋಡು ನ್ಯಾಯಾಲಯ ಸಂಕೀರ್ಣದಲ್ಲಿ ನಡೆಯಿತು. ಈ ಸಂದರ್ಭ ನ್ಯಾಯಾಲಯದಲ್ಲಿ ಬಾಕಿ ಇದ್ದ 2047 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು.
82 ಮೋಟಾರು ಅಪಘಾತ ವಿಮಾ ಪ್ರಕರಣಗಳು ಸೇರಿದಂತೆ ಒಟ್ಟು 2047 ಪ್ರಕರಣಗಳು ಇತ್ಯರ್ಥಗೊಳಿಸಲಾಯಿತು. ವಿವಿಧ ಪ್ರಕರಣಗಳಲ್ಲಿ ಒಟ್ಟು 3,71,33,715 ರೂ. ಮೊತ್ತ ಪರಿಹಾರವಾಗಿ ನೀಡಲು ಸೂಚಿಸಲಾಯಿತು. ಅದಾಲತ್‍ನಲ್ಲಿ ಹೊಸದಾಗಿ ದಾಖಲಾದ 104 ಪ್ರಕರಣಗಳಲ್ಲಿ 59,34,000 ರೂ.ಗಳನ್ನು ಪಾವತಿಸಲು ನಿರ್ದೇಶಿಸಲಾಯಿತು. ಜಿಲ್ಲಾ ನ್ಯಾಯಾಧೀಶ ಕೆ.ಕೆ.ಬಾಲಕೃಷ್ಣನ್ ಮತ್ತು ಜಿಲ್ಲಾ ಕಾನೂನು ಪ್ರಾಧಿಕಾರ(ಡಿಎಲ್‍ಎಸ್‍ಎ)ಕಾರ್ಯದರ್ಶಿ ಉಪನ್ಯಾಯಾಧೀಶೆ ಆರ್.ವಂದನಾ ನೇತೃತ್ವ ವಹಿಸಿದ್ದರು.