ನವದೆಹಲಿ: ದೆಹಲಿಯಲ್ಲಿ ನಡೆಯಲಿರುವ ಜಿ-20 ಶೃಂಗ ಸಭೆಗೆ ಒಡಿಶಾದ 45 ವರ್ಷದ ಬುಡಕಟ್ಟು ಮಹಿಳೆ ರಾಯ್ಮತಿ ಗ್ಯೂರಿಯಾ ಎಂಬುವವರನ್ನು ಖುದ್ದು ಸರ್ಕಾರವೇ ಆಹ್ವಾನಿಸಿದೆ.
ನವದೆಹಲಿ: ದೆಹಲಿಯಲ್ಲಿ ನಡೆಯಲಿರುವ ಜಿ-20 ಶೃಂಗ ಸಭೆಗೆ ಒಡಿಶಾದ 45 ವರ್ಷದ ಬುಡಕಟ್ಟು ಮಹಿಳೆ ರಾಯ್ಮತಿ ಗ್ಯೂರಿಯಾ ಎಂಬುವವರನ್ನು ಖುದ್ದು ಸರ್ಕಾರವೇ ಆಹ್ವಾನಿಸಿದೆ.
ಭುಮಿಯಾ ಎಂಬ ಬುಡಕಡ್ಡು ಜನಾಂಗಕ್ಕೆ ಸೇರಿದ ರಾಯ್ಮತಿ ಸಾಮಾನ್ಯ ಮಹಿಳೆಯಲ್ಲ. ಕೃಷಿಯಲ್ಲಿ ತೊಡಗಿಸಿಕೊಂಡು ಸಾಂಪ್ರದಾಯಿಕ ಕೃಷಿ ಜತೆ ತಂತ್ರಜ್ಞಾನ ಬಳಸಿಕೊಂಡು ಯಶಸ್ವಿಯಾಗಿದ್ದಾರೆ.
ಸೆ. 09ರಂದು ಜಿ-20ಯ ಆಹ್ವಾನಿತ ಗಣ್ಯರು ಭಾರತೀಯ ಕೃಷಿ ಅಧ್ಯಯನ ಸಂಸ್ಥೆಗೆ ಭೇಟಿ ನೀಡಲಿದ್ದಾರೆ. ರಾಯ್ಮತಿ ಗ್ಯೂರಿಯರವರು ಬುಡಕಟ್ಟು ರೀತಿಯಲ್ಲಿ ಸಾಂಪ್ರದಾಯಿಕ ರಾಗಿ ಕೃಷಿ ಮತ್ತು ರಾಗಿಯ ಮಹತ್ವದ ಬಗ್ಗೆ ಗಣ್ಯರಿಗೆ ವಿವರಿಸಲಿದ್ದಾರೆ. ರಾಯ್ಮತಿ ಒಡಿಶಾ ಮಿಲ್ಲೆಟ್ ಮಿಷನ್ ಎಂಬ ಯೊಜನೆಯನ್ನು ಅತ್ಯಂತ ಸಮರ್ಪಕವಾಗಿ ಬಳಸಿಕೊಂಡು, ಉತ್ತಮ ಇಳುವರಿ ಪಡೆದಿದ್ದಾರೆ. ಅಳಿವಿನಂಚಿನಲ್ಲಿರುವ ಸುಮಾರು 72 ಬಗೆಯ ಭತ್ತ ಮತ್ತು 30 ವಿಧದ ಧಾನ್ಯಗಳನ್ನು ಸಂರಕ್ಷಿಸಿ ಮಾದರಿಯಾಗಿದ್ದಾರೆ.
ಸಾವಯವ ಕೃಷಿಯ ಕುರಿತು 2,500ಕ್ಕೂ ಅಧಿಕ ಕೃಷಿಕರಿಗೆ ತರಬೇತಿ ನೀಡಿ ಸಾಧನೆಗೈದಿರುವ ಈಕೆಗೆ 2012ರಲ್ಲಿ ಜಿನೋಮ್ ಸೇವಿಯರ್ ಕಮ್ಯೂನಿಟಿ ಪ್ರಶಸ್ತಿ ಮತ್ತು 2015, 2017 ಹಾಗೂ 2018ರಲ್ಲಿ ಟಾಟಾ ಸ್ಟೀಲ್ ವತಿಯಿಂದ ಉತ್ತಮ ರೈತೆ ಎಂಬ ಪ್ರಶಸ್ತಿಗಳೂ ಸಂದಿವೆ.