ನವದೆಹಲಿ (PTI): 'ಜಿ20 ಶೃಂಗಸಭೆಯ ಅಂಗವಾಗಿ ದೆಹಲಿ ಪೊಲೀಸರು ಶನಿವಾರ ಪೂರ್ಣ ಪ್ರಮಾಣದ ತಾಲೀಮು ನಡೆಸಿದರು. ಅಲ್ಲದೇ ರಾಷ್ಟ್ರೀಯ ರಾಜಧಾನಿಯ ವಿವಿಧ ಭಾಗಗಳಿಂದ ನವದೆಹಲಿ ಜಿಲ್ಲೆಯಡೆಗೆ ಅನೇಕ ಪೊಲೀಸರು ವಾಹನಗಳಿಗೆ ಬೆಂಗಾವಲಾಗಿ ಬರುವ ತಾಲೀಮನ್ನೂ ನಡೆಸಿದರು' ಎಂದು ಅಧಿಕಾರಿಗಳು ತಿಳಿಸಿದರು.

'ಬೆಂಗಾವಲಿನ ತಾಲೀಮಿನ ವೇಳೆ ಸರ್ದಾರ್ ಪಟೇಲ್ ಮಾರ್ಗ- ಪಂಚಶೀಲ ಮಾರ್ಗ, ಸರ್ದಾರ್ ಪಟೇಲ್ ಮಾರ್ಗ- ಕೌಟಿಲ್ಯ ಮಾರ್ಗ, ಗೋಲ್ ಮೇಥಿ ರೌಂಡ್‌ಅಬೌಟ್, ಮಾನ್‌ಸಿಂಗ್ ರೋಡ್ ರೌಂಡ್‌ಅಬೌಟ್, ಮಥುರಾ ರಸ್ತೆ, ಜಾಕೀರ್ ಹುಸೇನ್ ಮಾರ್ಗ- ಸುಬ್ರಮಣಿಯನ್ ಭಾರತಿ ಮಾರ್ಗ, ಭೈರೋನ್ ಮಾರ್ಗ- ರಿಂಗ್‌ರೋಡ್ ಮುಂತಾದೆಡೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು' ಎಂದು ಅಧಿಕಾರಿಗಳು ಹೇಳಿದ್ದಾರೆ.