ನವದೆಹಲಿ: ಜಿ-20 ಶೃಂಗಸಭೆಯನ್ನು ಮುಕ್ತಾಯಗೊಂಡಿದ್ದು, ಬ್ರಿಟನ್ ಪ್ರಧಾನಿ ರಿಷಿ ಸುನಕ್ ದಂಪತಿ ಬ್ರಿಟನ್ ಗೆ ವಾಪಸ್ ತೆರಳಿದ್ದಾರೆ.
ಒಗ್ಗಟ್ಟಿನಲ್ಲಿ ಬಲವಿದೆ, ಐತಿಹಾಸಿಕ ಜಿ-20 ಶೃಂಗಸಭೆಯನ್ನು ಆಯೋಜಿಸಿದ್ದಕ್ಕಾಗಿ ಧನ್ಯವಾದಗಳು ಪ್ರಧಾನಿ ಮೋದಿ, ಆತ್ಮೀಯ ಸ್ವಾಗತ ಕೋರಿದ ಭಾರತೀಯರಿಗೆ ಧನ್ಯವಾದಗಳು ಎಂದು ಸುನಕ್ ಟ್ವೀಟ್ ಮಾಡಿದ್ದಾರೆ.
ಜಾಗತಿಕ ಆಹಾರ ಭದ್ರತೆಯಿಂದ ಹಿಡಿದು ಅಂತಾರಾಷ್ಟ್ರೀಯ ಪಾಲುದಾರಿಕೆ ವರೆಗೂ ಇದು ಅತ್ಯಂತ ಕಾರ್ಯನಿರತ ಆದರೆ ಯಶಸ್ವಿ ಶೃಂಗಸಭೆಯಾಗಿತ್ತು ಎಂದು ಸುನಕ್ ಹೇಳಿದ್ದಾರೆ.
ಔತಣಕೂಟಕ್ಕೆ ಫ್ರಾಕ್ ಧರಿಸಿ ಬಂದಿದ್ದ ಸುನಕ್ ಪತ್ನಿ ಅಕ್ಷತಾ ಮೂರ್ತಿ ಇಂದು ಭಾರತೀಯ ಉಡುಗೆ ತೊಟ್ಟು ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿದ್ದರು.