ನವದೆಹಲಿ: ಜಿ-20 ಆತಿಥ್ಯ ವಹಿಸಿದ್ದ ಬೆನ್ನಲ್ಲೇ 'ಕ್ವಾಡ್' (ಭಾರತ, ಆಸ್ಟ್ರೇಲಿಯಾ, ಜಪಾನ್ ಮತ್ತು ಅಮೆರಿಕ ದೇಶಗಳ ಕೂಟ) ಶೃಂಗದ ಆತಿಥ್ಯ ವಹಿಸಲು ಭಾರತ ಸಿದ್ಧತೆ ನಡೆಸುತ್ತಿದೆ. ಇದು ರಷ್ಯಾ ಮತ್ತು ಚೀನಾ ದೇಶಗಳ ಆತಂಕಕ್ಕೆ ಕಾರಣವಾಗಿದೆ. ಶೃಂಗದ ದಿನಾಂಕ ಇನ್ನೂ ಅಂತಿಮವಾಗಿಲ್ಲ.

ಹಿಂದೂ ಮಹಾಸಾಗರ-ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಆಕ್ರಮಣಶೀಲತೆಯನ್ನು ತಡೆಯುವುದಕ್ಕಾಗಿಯೇ ಈ ನಾಲ್ಕು ದೇಶಗಳು ಜತೆಯಾಗಿ ಕ್ವಾಡ್ ಕೂಟವನ್ನು ರಚಿಸಿಕೊಂಡಿವೆ.
ಈ ಹಿಂದೆ ಕ್ವಾಡ್ ರಚನೆಗೆ ರಷ್ಯಾ ಸಹ ವಿರೋಧ ವ್ಯಕ್ತಪಡಿಸಿತ್ತು. ಇದು ಚೀನಾ ವಿರುದ್ಧ ಅಮೆರಿಕದ ವಿಭಜನಕಾರಿ ಮತ್ತು ಪ್ರತ್ಯೇಕತಾ ನೀತಿ ಎಂದು ಹೇಳಿತ್ತು.