HEALTH TIPS

ಕುಷ್ಠರೋಗ ನಿರ್ಮೂಲನಕ್ಕೆ ಯೋಜನೆ ಜಿಲ್ಲೆಯಲ್ಲಿ ಬಾಲಮಿತ್ರ 2.0 ಅಭಿಯಾನ: ಜಾಗೃತಿ

 

               ಕಾಸರಗೋಡು: ಜಿಲ್ಲೆಯಲ್ಲಿ 2 ವರ್ಷದಿಂದ 18 ವರ್ಷ ವಯಸ್ಸಿನ ಮಕ್ಕಳಲ್ಲಿ ಕುಷ್ಠರೋಗವನ್ನು ಕಂಡುಹಿಡಿಯಲು ಬಾಲಮಿತ್ರ 2.0 ಅಭಿಯಾನ ಸೆಪ್ಟೆಂಬರ್ 20 ರಂದು ಪ್ರಾರಂಭವಾಗುತ್ತದೆ. ಇದರ ಅಂಗವಾಗಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜು ಮತ್ತು ಅಂಗನವಾಡಿಗಳ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತದೆ. ಪೆÇೀಷಕರಿಗೆ ಮತ್ತು ಮಕ್ಕಳಿಗೆ ಕುಷ್ಠರೋಗದ ಕುರಿತು ಅರಿವು ಮೂಡಿಸಲಾಗುವುದು. ಕುಷ್ಠ ರೋಗವನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿ ಚಿಕಿತ್ಸೆ ನೀಡಿ ಅಂಗವೈಕಲ್ಯ ಮತ್ತು ರೋಗ ಹರಡುವಿಕೆಯನ್ನು ತೊಡೆದುಹಾಕುವುದು ಅಭಿಯಾನದ ಉದ್ದೇಶವಾಗಿದೆ.

            ಜಿಲ್ಲೆಯಲ್ಲಿ 1348 ಅಂಗನವಾಡಿಯಿಂದ 22713 ಮಕ್ಕಳನ್ನು ಹಾಗೂ 1235 ಶಾಲೆಗಳಿಂದ 237464 ಮಕ್ಕಳನ್ನು ಅಭಿಯಾನಕ್ಕೆ ಒಳಪಡಿಸಲಾಗಿದೆ.  ಜಿಲ್ಲೆಯ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಶಾಲಾ ನೋಡಲ್ ಅಧ್ಯಾಪಕರಿಗೂ ಕುಷ್ಠರೋಗ ಮತ್ತು ಬಾಲಮಿತ್ರ 2.0 ಕಾರ್ಯಕ್ರಮದ ಕುರಿತು ಜಾಗೃತಿ ಮೂಡಿಸುವ ತರಗತಿಗಳನ್ನು ನೀಡಲಾಗುತ್ತದೆ. ನೋಡಲ್ ಶಿಕ್ಷಕರು ಮಕ್ಕಳಿಗೆ ತರಬೇತಿ ನೀಡಿ ಮಕ್ಕಳು ಮನೆಗಳಲ್ಲಿ ಹೋಗಿ ಪೆÇೀಷಕರ ಸಹಾಯದಿಂದ ದೇಹವನ್ನು ತಪಾಸಣೆ ಮಾಡಿ ದೇಹದಲ್ಲಿ ಕುಷ್ಠರೋಗವನ್ನು ಶಂಕಿಸುವ ಕಲೆಗಳು, ಗಾಯಗಳನ್ನು ಗಮನಿಸಿ ತರಗತಿಯ ಶಿಕ್ಷಕರಿಗೆ ತಿಳಿಸುತ್ತಾರೆ. ರೋಗಲಕ್ಷಣಗಳಿರುವ ಮಕ್ಕಳ ಹೆಸರು ಮತ್ತು ವಿವರಗಳನ್ನು ಅಧ್ಯಾಪಕರು ಮೆಡಿಕಲ್ ಆಫೀಸರ್‍ಗೆ ನೀಡುತ್ತಾರೆ ಮತ್ತು ಮೆಡಿಕಲ್ ಆಫೀಸರ್ ಹೆಚ್ಚಿನ ಪರೀಕ್ಷೆಗೆ ಒಳಪಡಿಸಿ ರೋಗ ನಿರ್ಣಯವನ್ನು ನಡೆಸಲಿದ್ದಾರೆ.

                 ರೋಗ ತಿಳಿಯುವ ವಿಧಾನ:

            ಕುಷ್ಠರೋಗವು ಗಾಳಿಯ ಮೂಲಕ ಹರಡುವ ಸಾಂಕ್ರಾಮಿಕ ರೋಗವಾಗಿದ್ದು. ಚಿಕಿತ್ಸೆಗೆ ಒಳಪಡದ ರೋಗಿಯು ಕೆಮ್ಮುವಾಗ ಮತ್ತು ಸೀನಿದಾಗ ಹೊರಬರುವ ರೋಗಾಣುಗಳಿಂದ ರೋಗವು ಹರಡುತ್ತದೆ. ಚರ್ಮದಲ್ಲಿ ಉಂಟಾಗುವ ಕೆಂಪು ಬಣ್ಣದ ಕಲೆಗಳು, ಸ್ಪರ್ಶದ ಸಾಮಥ್ರ್ಯವು ಕಡಿಮೆಯಾದ ಗಾಯಗಳು, ಚರ್ಮ ದಪ್ಪವಾಗಿ  ಶುಷ್ಕ ಮತ್ತು ಗಟ್ಟಿಯಾಗಿರುವುದು ಮುಂತಾದವುಗಳು ರೋಗದ ಲಕ್ಷಣಗಳಾಗಿದೆ. ಚಿಕಿತ್ಸೆ ಮೂಲಕ ಕುಷ್ಠರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries