ಕೊಚ್ಚಿ: ಪ್ರಿಯಕರನನ್ನು ಮದ್ಯ ಮತ್ತು ಜ್ಯೂಸ್‍ಗೆ ವಿಷ ಬೆರೆಸಿ ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿತೆಗೆ ಕೇವಲ 22 ವರ್ಷ ಎಂಬ ಅಂಶವನ್ನು ಪರಿಗಣಿಸಿ ಗ್ರೀಷ್ಮಾಗೆ ಹೈಕೋರ್ಟ್ ಜಾಮೀನು ನೀಡಿದೆ.
ಸಮಾಜದ ಭಾವನೆಯು ಆರೋಪಿಗೆ ವಿರುದ್ಧವಾಗಿದೆ ಎಂಬ ಕಾರಣಕ್ಕಾಗಿ ನ್ಯಾಯಯುತ ಜಾಮೀನು ನಿರಾಕರಿಸಲಾಗುವುದಿಲ್ಲ ಎಂದು ಹೈಕೋರ್ಟ್ ಗಮನಿಸಿದೆ.
ಗ್ರೀಷ್ಮಾಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ ಮತ್ತು ಶರೋನ್ ಸಾವಿನ ಹೇಳಿಕೆಯು ಗ್ರೀಷ್ಮಾ ವಿರುದ್ಧ ಏನನ್ನೂ ಹೇಳುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಆರೋಪಿತೆಗೆ ಯಾವುದೇ ಪೂರ್ವ ಅಪರಾಧ ಹಿನ್ನೆಲೆ ಇಲ್ಲ. ಜಾಮೀನು ನೀಡಿದರೆ ಗ್ರೀಷ್ಮಾ ತಲೆಮರೆಸಿಕೊಳ್ಳುತ್ತಾರೆ ಎಂಬ ವಾದವನ್ನು ಪ್ರಾಸಿಕ್ಯೂಷನ್ ಹೊಂದಿಲ್ಲ. ಜಾಮೀನು ನೀಡಿದರೆ ಆರೋಪಿ ವಿಚಾರಣೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳು ಅತಂತ್ರವಾಗಿವೆ. ಚಾರ್ಜ್ ಶೀಟ್ ಸಲ್ಲಿಕೆಯಾದ ಬಳಿಕವೂ ಒಬ್ಬ ವ್ಯಕ್ತಿಗೆ ಜಾಮೀನು ನಿರಾಕರಿಸಲು ಸಾಕಷ್ಟು ಕಾರಣವಿರಬೇಕು ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ.
ಕಳೆದ ವರ್ಷ ಅಕ್ಟೋಬರ್ 14ರಂದು ಗ್ರೀಷ್ಮಾ ತನ್ನ ಪ್ರಿಯಕರ ಶರೋನ್‍ನನ್ನು ವಿಷ ಬೆರೆಸಿ ಕೊಲೆ ಮಾಡಿದ್ದಳು. 25ರಂದು ಶಾರೀರಿಕ ಅಸ್ವಸ್ಥನಾಗಿ ಚಿಕಿತ್ಸೆ ಪಡೆಯುತ್ತಿದ್ದಾಗ ಶರೋನ್ ಮೃತಪಟ್ಟಿದ್ದ. ಅದೇ ತಿಂಗಳ 31ರಂದು ಪೋಲೀಸರು ಗ್ರೀಷ್ಮಾಳನ್ನು ಬಂಧಿಸಿದ್ದರು. ಗ್ರೀಷ್ಮಾ ಳ ತಾಯಿ ಮತ್ತು ಚಿಕ್ಕಪ್ಪ ಪ್ರಕರಣದಲ್ಲಿ ಸಹ ಆರೋಪಿಗಳಾಗಿದ್ದು, 142 ಸಾಕ್ಷಿಗಳು, 175 ದಾಖಲೆಗಳು ಮತ್ತು 55 ಇತರ ದಾಖಲೆಗಳನ್ನು ಚಾರ್ಜ್ ಶೀಟ್‍ನಲ್ಲಿ ಸೇರಿಸಲಾಗಿದೆ.