ತಿರುವನಂತಪುರಂ: ರಾಜ್ಯದ ಸ್ಥಳೀಯ ಸಂಸ್ಥೆಗಳ ಮತದಾರರ ಪಟ್ಟಿಗೆ ನಿಮ್ಮ ಹೆಸರನ್ನು ಸೇರಿಸಲು ಈ ವಾರ ಮತ್ತೊಂದು ಅವಕಾಶ ನೀಡಲಾಗಿದೆ. ಸೆಪ್ಟೆಂಬರ್ 23ರ ಶನಿವಾರದವರೆಗೆ ಹೆಸರು ಸೇರಿಸಬಹುದು ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ. ಜನವರಿ 1, 2023 ರಂದು ಅಥವಾ ಅದಕ್ಕೂ ಮೊದಲು 18 ವರ್ಷಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಅರ್ಹರಾಗಿರುತ್ತಾರೆ. ಆಯೋಗವು www.sec.kerala.gov.in ವೆಬ್‍ಸೈಟ್ ಮೂಲಕ ಹೆಸರು ಸೇರ್ಪಡೆ, ಲೋಪ ಮತ್ತು ತಿದ್ದುಪಡಿಗಾಗಿ ಅರ್ಜಿಯನ್ನು ಸ್ವೀಕರಿಸುತ್ತದೆ.
ಆಯೋಗದ ವೆಬ್‍ಸೈಟ್ ನಾಗರಿಕ ನೋಂದಣಿ ಮೂಲಕ ವ್ಯಕ್ತಿಗಳಿಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಮತ್ತು ಏಜೆನ್ಸಿ ನೋಂದಣಿ ಮೂಲಕ ಅಕ್ಷಯ/ಜನಸೇವಾ ಕೇಂದ್ರಗಳಿಗೆ ಸೌಲಭ್ಯವನ್ನು ಒದಗಿಸಿದೆ. ಸೆ.8ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಇದರ ಪ್ರಕಾರ 941 ಗ್ರಾ.ಪಂ.ಗಳಲ್ಲಿ 21563916, 87 ನಗರಸಭೆಗಳಲ್ಲಿ 3651931 ಹಾಗೂ 6 ಪಾಲಿಕೆಗಳಲ್ಲಿ 2454689 ಮತದಾರರಿದ್ದಾರೆ.
ಕರಡು ಮತದಾರರ ಪಟ್ಟಿಯ ಪ್ರಕಾರ, ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಎಲ್ಲೆಲ್ಲಿ ಹೆಚ್ಚು ಮತ್ತು ಕಡಿಮೆ ಮತದಾರರಿದ್ದಾರೆ ಎಂದು ತಿಳಿದುಬರಲಿದೆ. ಈ ವರೆಗಿನ ಅಂಕಿಅಂಶಗಳ ಪ್ರಕಾರ ಕೋಝೀಕ್ಕೋಡ್ ಪಂಚಾಯಿತಿಯ ಒಳವಣ್ಣ ಅತಿ ಹೆಚ್ಚು ಮತದಾರರನ್ನು ಹೊಂದಿದ್ದು, 25491 ಪುರುಷ ಮತ್ತು 26833 ಮಹಿಳಾ ಮತದಾರರಿದ್ದಾರೆ. ಒಳವಣ್ಣದಲ್ಲಿ ಇಬ್ಬರು ತೃತೀಯಲಿಂಗಿ ಸೇರಿದಂತೆ 52326 ಮತದಾರರಿದ್ದಾರೆ. ಇಡುಕ್ಕಿ ಗ್ರಾಮ ಪಂಚಾಯಿತಿಯ ಇಡಮಲಕುಡಿಯಲ್ಲಿ ಕನಿಷ್ಠ ಮತದಾರರಿದ್ದು ಒಟ್ಟು 1899 ಮತದಾರರು (ಪುರುಷ-941, ಮಹಿಳೆ-95326) ಇದ್ದಾರೆ.
ಹೆಚ್ಚಿನ ಮತದಾರರನ್ನು ಹೊಂದಿರುವ ನಗರಸಭೆ ಆಲಪ್ಪುಳವಾಗಿದ್ದು, ಪುರುಷರು - 63009, ಮಹಿಳೆಯರು - 69630, ತೃತೀಯ ಲಿಂಗಿಗಳು- 2 , ಒಟ್ಟು – 132641 ಮತದಾರರಿದ್ದಾರೆ. ಎರ್ನಾಕುಳಂನ ಕೂತಟ್ಟುಕುಳಂ ನಗರಸಭೆಯು ಕಡಿಮೆ ಸಂಖ್ಯೆಯ ಮತದಾರರನ್ನು ಹೊಂದಿದೆ. ಪುರುಷರು – 6929, ಮಹಿಳೆಯರು – 7593 ಒಟ್ಟು 14522). ತಿರುವನಂತಪುರ ಮಹಾನಗರ ಪಾಲಿಕೆಯಲ್ಲಿ ಪುರುಷ- 385231, ಮಹಿಳೆ-418540 ತೃತೀಯಲಿಂಗಿ-8 ಒಟ್ಟು-803779 ಮತದಾರರಿದ್ದಾರೆ. ಕಣ್ಣೂರು ಕಾರ್ಪೋರೇಷನ್‍ನಲ್ಲಿ ಕಡಿಮೆ ಮತದಾರರಿದ್ದಾರೆ. ಪುರುರುರು - 85503, ಮಹಿಳೆಯರು - 102024 ಒಟ್ಟು-187527 ಮತದಾರರಿದ್ದಾರೆ.