ಉಪ್ಪಳ: ಬೆಂಗಳೂರಿನ ವೀರಲೋಕ ಪ್ರಕಾಶನದ ದೇಸಿ ಜಗಲಿ ಮತ್ತು ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ ಜಿಲ್ಲಾ ಮಟ್ಟದ ಕಥಾ ಕಮ್ಮಟ ಸೆಪ್ಟೆಂಬರ್ 23 ಮತ್ತು 24ರಂದು ಉಪ್ಪಳ ಬಾಯಿಕಟ್ಟೆ ಸನಿಹದ ಲಕ್ಷ್ಮಿ ಮಿಲ್ಸ್ ಸಭಾಭವನದಲ್ಲಿ ನಡೆಯಲಿದೆ. ಕಮ್ಮಟದಲ್ಲಿ ಪಾಲ್ಗೊಳ್ಳುವವರಿಗೆ ಎರಡು ದಿವಸಗಳ ಕಾಲ ಊಟ ಮತ್ತು ಉಪಾಹಾರಗಳ ವ್ಯವಸ್ಥೆಯಿದ್ದು, ಪ್ರವೇಶವು ಉಚಿತವಾಗಿರುತ್ತದೆ.
ಹಿರಿಯ ಸಂಶೋಧಕ ಮತ್ತು ಅನುವಾದಕ ಡಾ. ಮೋಹನ ಕುಂಟಾರ್ ಅವರು ಕಥಾ ಕಮ್ಮಟದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಕಾಸರಗೋಡು ಜಿಲ್ಲೆಯ ಉದಯೋನ್ಮುಖ ಬರಹಗಾರರಿಗೆ ಇದೊಂದು ಒಳ್ಳೆಯ ಅವಕಾಶವಾಗಿದ್ದು, ನಲವತ್ತು ವರ್ಷದೊಳಗಿನ ಆಸಕ್ತ ಬರಹಗಾರರು ಈ ಕಥಾ ಕಮ್ಮಟದಲ್ಲಿ ಶಿಬಿರಾರ್ಥಿಗಳಾಗಿ ಪಾಲ್ಗೊಳ್ಳಬಹುದಾಗಿದೆ. ಆಸಕ್ತ ಬರಹಗಾರರು ಸಂಚಾಲಕರಾದ ಡಾ. ಸುಭಾಷ್ ಪಟ್ಟಾಜೆ(9645081966) ಮತ್ತು ಹಿರಿಯ ಲೇಖಕ ಪೆÇ್ರ. ಪಿ. ಎನ್. ಮೂಡಿತ್ತಾಯ(9495296720
)ಅವರನ್ನು ಸಂಪರ್ಕಿಸಿ ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.