ಕಾಸರಗೋಡು: ಮಣಿಪುರದಲ್ಲಿ ಕುಕಿ ಜನಾಂಗದವರನ್ನು ಅಮಾನುಷವಾಗಿ ನಡೆಸಿಕೊಳ್ಳುತ್ತಿರುವ ಧೋರಣೆ ಖಂಡಿಸಿ ಹಾಗೂ ಮಣಿಪುರದಲ್ಲಿ ಶಾಂತಿ ಸುವ್ಯವಸ್ಥೆಗೆ ಆಗ್ರಹಿಸಿ ಸಂಸದ ರಾಜಮೋಹನ್ ಉನ್ನಿಥಾನ್ ಡಿಸಿಸಿ ಕಚೇರಿ ಆವರಣದಲ್ಲಿ 24 ತಾಸುಗಳ ಧರಣಿ ಸತ್ಯಾಗ್ರಹ ಶನಿವಾರ ಕಾಸರಗೋಡಿನಲ್ಲಿ ಶನಿವಾರ ಆರಂಭಗೊಂಡಿತು.
ಕಾಸರಗೋಡು ವಿದ್ಯಾನಗರದಲ್ಲಿರುವ ಜಿಲ್ಲಾ ಕಾಂಗ್ರೆಸ್ ಸಮಿತಿ ಕೇಂದ್ರ ಕಚೇರಿ ಎದುರು ಆರಂಭವಾದ 'ಬಹುಸ್ವರತಾ ಸಂಗಮ'ವನ್ನು ಎ.ಐ.ಸಿ.ಸಿ.ಪ್ರಧಾನ ಕಾರ್ಯದರ್ಶಿ ಕೆ.ಸಿ. ಸಂಸದ ವೇಣುಗೋಪಾಲ್ ಉದ್ಘಾಟಿಸಿದರು.
ಡಿಸಿಸಿ ಅಧ್ಯಕ್ಷ ಪಿ.ಕೆ.ಫೈಸಲ್ ಅಧ್ಯಕ್ಷತೆ ವಹಿಸಿದ್ದರು. ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಮುಹಿಸಿಂ ಹೈದರ್, ಎಐಸಿಸಿ ಕಾರ್ಯದರ್ಶಿ ಎ.ಮೋಹನನ್, ಮಾಜಿ ಸಚಿವ ಬಿ. ರಮಾನಾಥ ರೈ, ಖಾದರ್ ಮಾಙËಡ್, ಪಿ.ಎ ಅಶ್ರಫಲಿ, ಪಿ. ಕುಞÂಕಣ್ಣನ್, ಕರಣ್‍ಥಾಪ, ಎ.ಗೋವಿಂದನ್, ಸಿ.ಟಿ ಅಹಮ್ಮದಾಲಿ ಸಾಮಾಜಿಕ, ಸಾಂಸ್ಕøತಿಕ, ಧಾರ್ಮಿಕ ಮುಖಂಡರು ಭಾಗವಹಿಸಿದ್ದರು.
ಸೆ. 10ರಂದು ಬೆಳಗ್ಗೆ 9ಕ್ಕೆ ಉಪವಾಸ ಸತ್ಯಾಗ್ರಹ ಕಾರ್ಯಕ್ರಮದ ಸಮಾರೋಪಗೊಳ್ಳಲಿದೆ. ತಲಶ್ಶೇರಿ ಆರ್ಚ್ ಡಯಾಸಿಸ್‍ನ ಆರ್ಚ್ ಬಿಷಪ್ ಮಾರ್ ಜೋಸೆಫ್ ಪಂಪ್ಲಾನಿ ಸಮಾರೋಪ ಸಮಾರಂಭ ಉದ್ಘಾಟಿಸುವರು. ಸಂಸದ ಎಂ.ಕೆ. ರಾಘವನ್ ಪ್ರಧಾನ ಭಾಷಣ ಮಾಡುವರು. ಡಿಸಿಸಿ ಅಧ್ಯಕ್ಷ ಪಿ.ಕೆ ಫೈಸಲ್, ರಾಜ್ಯ ಸಮಿತಿ ಮುಖಂಡರು, ಡಿಸಿಸಿ ಪದಾಧಿಕಾರಿಗಳು ಪಾಲ್ಗೊಳ್ಳುವರು.