ಪಟ್ನಾ: ದೆಹಲಿ ಹಾಗೂ ಬಿಹಾರದ ರಾಜಗಿರ್ ನಡುವೆ ಸಂಚರಿಸುವ ಶ್ರಮಜೀವಿ ಎಕ್ಸ್‌ಪ್ರೆಸ್ (12392) ರೈಲಿನ ಶೌಚಾಲಯದಲ್ಲಿ ಯುವತಿಯೊಬ್ಬಳ ಮೃತದೇಹ ಪತ್ತೆಯಾಗಿದೆ.
ಪಟ್ನಾ: ದೆಹಲಿ ಹಾಗೂ ಬಿಹಾರದ ರಾಜಗಿರ್ ನಡುವೆ ಸಂಚರಿಸುವ ಶ್ರಮಜೀವಿ ಎಕ್ಸ್‌ಪ್ರೆಸ್ (12392) ರೈಲಿನ ಶೌಚಾಲಯದಲ್ಲಿ ಯುವತಿಯೊಬ್ಬಳ ಮೃತದೇಹ ಪತ್ತೆಯಾಗಿದೆ.
ರೈಲು ರಾಜಗಿರ್ ನಿಲ್ದಾಣಕ್ಕೆ ಶನಿವಾರ ಬೆಳಿಗ್ಗೆ 10:30 ಕ್ಕೆ ಬಂದಾಗ ಸ್ವಚ್ಚತಾ ಸಿಬ್ಬಂದಿ ರೈಲಿನ EC16414C ಕೋಚಿನ ಶೌಚಾಲಯ ತೆರೆದಿದ್ದರು.
ಯುವತಿಯ ಗುರುತು ಪತ್ತೆಯಾಗಿಲ್ಲ. 25 ವರ್ಷದವರು ಎಂದು ಅಂದಾಜಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ರಾಜಗಿರ್ ರೈಲ್ವೆ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ
ಯುವತಿ ಕೊಲೆ ಆಗಿರಬಹುದು ಎಂದು ಮೇಲ್ನೋಟಕ್ಕೆ ತೋರುತ್ತದೆ. ಯಾರೋ ಕೊಲೆ ಮಾಡಿ ಆತ್ಮಹತ್ಯೆ ಎಂಬಂತೆ ಬಿಂಬಿಸಿರುವುದನ್ನು ಅನುಮಾನಿಸಲಾಗಿದೆ. ತನಿಖೆ ಕೈಗೆತ್ತಿಕೊಳ್ಳಲಾಗಿದ್ದು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಹೇಳಿದ್ದಾರೆ.