ನವದೆಹಲಿ: ಭಾರತೀಯ ಸಂಜ್ಞಾ ಭಾಷೆಯಲ್ಲಿ ಆನ್ ಲೈನ್ ಸ್ವಯಂ-ಕಲಿಕೆ ಕೋರ್ಸ್ ಗಳಿಗೆ ಚಾಲನೆ ನೀಡಲಾಗಿದ್ದು, ಇದು 10,000 ಐಎಸ್ಎಲ್ ಶಬ್ದಗಳನ್ನು ಒಳಗೊಂಡಿದೆ.
ಅಂತಾರಾಷ್ಟ್ರೀಯ ಸಂಜ್ಞಾ ಭಾಷಾ ದಿನಾಚರಣೆಯ ಅಂಗವಾಗಿ ಸಂಜ್ಞಾ ಭಾಷೆಯಲ್ಲಿ ಆನ್ ಲೈನ್ ಸ್ವಯಂ-ಕಲಿಕೆ ಕೋರ್ಸ್ ಗಳಿಗೆ ಚಾಲನೆ ನೀಡಲಾಗಿದೆ. ಇದೇ ವೇಳೆ ಹಣಕಾಸು ಶಬ್ದಗಳಿಗೆ ಸಂಬಂಧಿಸಿದಂತೆ 260 ಸಂಜ್ಞೆಗಳು ಸೇರ್ಪಡೆಗೊಂಡಿವೆ.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಆನ್‌ಲೈನ್ ಕೋರ್ಸ್‌ನ ಪ್ರಾಥಮಿಕ ಉದ್ದೇಶ ಶ್ರವಣ ದೋಷವುಳ್ಳ ಮಕ್ಕಳ ಪೋಷಕರು, ಒಡಹುಟ್ಟಿದವರು, ಶಿಕ್ಷಣ ತಜ್ಞರು ಭಾರತೀಯ ಸಂಕೇತ ಭಾಷೆಯಲ್ಲಿ ಮೂಲಭೂತ ಸಂವಹನ ಕೌಶಲ್ಯಗಳನ್ನು ಪಡೆದುಕೊಳ್ಳಲು ಅನುಕೂಲವಾಗಿದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಕೋರ್ಸ್ 10 ಮಾಡ್ಯೂಲ್‌ಗಳನ್ನು ಒಳಗೊಂಡಿದೆ, 30 ಅಗತ್ಯ ವಿಷಯಗಳನ್ನು ಒಳಗೊಂಡಿದೆ. ಕಲಿಯುವವರು ಮೂಲಭೂತ ISL ಸಂವಹನದ ಸಮಗ್ರ ತಿಳುವಳಿಕೆಯನ್ನು ಪಡೆದುಕೊಳ್ಳಲಿದ್ದಾರೆ.
ಈ ಉಪಕ್ರಮವು ಹಣಕಾಸು ಮತ್ತು ಬ್ಯಾಂಕಿಂಗ್ ವಲಯದಲ್ಲಿ ಕೆಲಸ ಮಾಡುವ ಶ್ರವಣದೋಷ ಹೊಂದಿರುವ ಮತ್ತು ಶ್ರವಣದೋಷವಿಲ್ಲದೇ ಇರುವ ವ್ಯಕ್ತಿಗಳ ನಡುವಿನ ಸಂವಹನ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.