ಅಹಮದಾಬಾದ್: ಗುಜರಾತ್‌ನ ಕಚ್ ಜಿಲ್ಲೆಯ ಮುಂದ್ರಾ ಬಂದರಿನಿಂದ ಆಮದು ಮಾಡಿದ ಸರಕುಗಳಿಂದ ಅಂದಾಜು ₹26.8 ಕೋಟಿಗೂ ಅಧಿಕ ಮೌಲ್ಯದ ಪ್ರಾಚೀನ ವಸ್ತುಗಳು ಮತ್ತು ಐತಿಹಾಸಿಕ ಕಲಾಕೃತಿಗಳನ್ನು ಕೇಂದ್ರ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ವಶಪಡಿಸಿಕೊಂಡಿದೆ.

ಈ ಕಾರ್ಯಾಚರಣೆಯ ಮೂಲಕ ಜಾಗತಿಕ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು ಡಿಆರ್‌ಐ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ.
ಪ್ರಾಚೀನ ಪ್ರತಿಮೆ, ವರ್ಣಚಿತ್ರಗಳು, ಪುರಾತನ ಪಿಠೋಪಕರಣಗಳನ್ನು ಸೇರಿದಂತೆ ಬೆಲೆಬಾಳುವ ಪಾರಂಪರಿಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳಲ್ಲಿ ಹಲವಾರು ವಸ್ತುಗಳು ಅಮೂಲ್ಯವಾದ ಕಲ್ಲು, ಚಿನ್ನ, ಬೆಳ್ಳಿಯಿಂದ ಮಾಡಲ್ಪಟ್ಟಿದ್ದು ಅಥವಾ ಚಿನ್ನ/ಬೆಳ್ಳಿಯ ಲೇಪನವನ್ನು ಹೊಂದಿದೆ.