ಗಾಂಧಿನಗರ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇತರೆ ಹಿಂದುಳಿದ ವರ್ಗಕ್ಕೆ (ಒಬಿಸಿ) ಇದ್ದ ಶೇ 10 ಮೀಸಲಾತಿಯನ್ನು ಶೇ 27ಕ್ಕೆ ಏರಿಸುವ ಮಸೂದೆಗೆ ಗುಜರಾತ್ ವಿಧಾನಸಭೆ ಒಪ್ಪಿಗೆ ನೀಡಿದೆ.
ಗಾಂಧಿನಗರ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇತರೆ ಹಿಂದುಳಿದ ವರ್ಗಕ್ಕೆ (ಒಬಿಸಿ) ಇದ್ದ ಶೇ 10 ಮೀಸಲಾತಿಯನ್ನು ಶೇ 27ಕ್ಕೆ ಏರಿಸುವ ಮಸೂದೆಗೆ ಗುಜರಾತ್ ವಿಧಾನಸಭೆ ಒಪ್ಪಿಗೆ ನೀಡಿದೆ.
ಗುಜರಾತ್ ಸ್ಥಳೀಯ ಪ್ರಾಧಿಕಾರಗಳ ಕಾನೂನು (ತಿದ್ದುಪಡಿ) ಮಸೂದೆ 2023ಕ್ಕೆ ಶುಕ್ರವಾರ ವಿಧಾನಸಭೆಯಲ್ಲಿ ಧ್ವನಿ ಮತದ ಅಂಗೀಕಾರ ಲಭಿಸಿದೆ.
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಎಸ್ ಜವೇರಿ ಅವರ ಆಯೋಗದ ಶಿಫಾರಸಿನ ಅನ್ವಯ ಮೀಸಲಾತಿ ಏರಿಕೆ ಮಾಡಲಾಗಿದೆ.
ಸ್ಥಳೀಯ ಸಂಸ್ಥೆಗಳಲ್ಲಿ ಇತರ ಹಿಂದುಳಿಗ ವರ್ಗಕ್ಕೆ ಶೇ 27ರಷ್ಟು ಮೀಸಲಾತಿ ನೀಡಲಾಗುವುದು ಎಂದು ಗುಜರಾತ್ ಸರ್ಕಾರ ಆ. 29ರಂದು ಘೋಷಣೆ ಮಾಡಿತ್ತು.
ಸದ್ಯ ಪರಿಶಿಷ್ಟ ವರ್ಗ ಹಾಗೂ ಪಂಗಡಗಳಿಗೆ ಇರುವ ಮೀಸಲಾತಿ ಮೇಲೆ ಇದು ಯಾವುದೇ ಪರಿಣಾಮ ಬೀರದು. ಶೇ 50ರ ಮೀಸಲಾತಿ ಮಿತಿಯನ್ನು ಇದು ಮೀರದು ಎಂದು ಸಂಸದೀಯ ವ್ಯವಹಾರಗಳ ಸಚಿವ ಋಷಿಕೇಶ್ ಪಟೇಲ್ ಅವರು ಮಸೂದೆ ಮಂಡನೆ ವೇಳೆ ಹೇಳಿದರು.