ಮುಂಬೈ (PTI): 'ಇಂಡಿಯಾ' ಮೈತ್ರಿಕೂಟದಲ್ಲಿ ಈಗ 28 ಪಕ್ಷಗಳು ಇವೆ. ಹೊಸದಾಗಿ ಮಹಾರಾಷ್ಟ್ರದ ಪೀಸಂಟ್ಸ್ ಅಂಡ್ ವರ್ಕರ್ಸ್ ಪಾರ್ಟಿ (ಪಿಡಬ್ಲುಪಿ) ಮತ್ತೊಂದು ಪಕ್ಷವು (ಹೆಸರು ಖಚಿತವಾಗಿಲ್ಲ) ಜೊತೆಗೂಡಿವೆ ಎಂದು ಮೂಲಗಳು ತಿಳಿಸಿವೆ.
ಮುಂಬೈ (PTI): 'ಇಂಡಿಯಾ' ಮೈತ್ರಿಕೂಟದಲ್ಲಿ ಈಗ 28 ಪಕ್ಷಗಳು ಇವೆ. ಹೊಸದಾಗಿ ಮಹಾರಾಷ್ಟ್ರದ ಪೀಸಂಟ್ಸ್ ಅಂಡ್ ವರ್ಕರ್ಸ್ ಪಾರ್ಟಿ (ಪಿಡಬ್ಲುಪಿ) ಮತ್ತೊಂದು ಪಕ್ಷವು (ಹೆಸರು ಖಚಿತವಾಗಿಲ್ಲ) ಜೊತೆಗೂಡಿವೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೆ, ಈಶಾನ್ಯ ರಾಜ್ಯಗಳಲ್ಲಿನ 'ಅಸ್ಸಾಂ ಜಾತೀಯ ಪರಿಷತ್, ರಾಜಾರ್ ದಲ್ ಮತ್ತು ಅಂಚಾಲಿಕ್ ಗಣ್ ಮಂಚ್-ಭುಯನ್' ಪಕ್ಷಗಳು ಮೈತ್ರಿಕೂಟ ಸೇರುವ ಆಶಯ ವ್ಯಕ್ತಪಡಿಸಿವೆ ಎಂದು ಮೂಲಗಳು ವಿವರಿಸಿವೆ.
ಗುರುವಾರದ ಸಭೆಯಲ್ಲಿ ಎನ್‌ಸಿಪಿಯ ಶರದ್ ಪವಾರ್, ಸುಪ್ರಿಯಾ ಸುಳೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷರಾದ ಸೋನಿಯಾಗಾಂಧಿ, ರಾಹುಲ್‌ಗಾಂಧಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಮುಖ್ಯಸ್ಥ ಜಯಂತ್ ಔಧುರಿ ಪ್ರಮುಖವಾಗಿ ಭಾಗವಹಿಸಿದ್ದರು.