ಕಾಸರಗೋಡು: ಕೇರಳದಲ್ಲಿ ರೈಲುಗಳ ಮೇಲೆ ಕಲ್ಲು ತೂರಾಟ ಮುಂದುವರಿದಿದೆ. ನೇತ್ರಾವತಿ ಎಕ್ಸ್‍ಪ್ರೆಸ್ ಮೇಲೆ ನಿನ್ನೆ ಕಲ್ಲು ತೂರಾಟ ನಡೆದಿದೆ.
ಶುಕ್ರವಾರ ರಾತ್ರಿ 8.45ಕ್ಕೆ ಕುಂಬಳೆ- ಉಪ್ಪಳ ಮಧ್ಯೆ ಈ ಘಟನೆ ನಡೆದಿದೆ. ಕಲ್ಲು ತೂರಾಟದಲ್ಲಿ ಎಸ್2 ಬೋಗಿಯ ಬಾಗಿಲಿನ ಗಾಜು ಒಡೆದಿದೆ. ಆದರೆ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ. ಮಂಗಳೂರಿನ ಆರ್‍ಪಿಎಫ್ ಸಿಬ್ಬಂದಿಗಳು ಹಾಗೂ ಕುಂಬಳೆ ಪೋಲೀಸರು ಆಗಮಿಸಿ ತನಿಖೆ ಆರಂಭಿಸಿದ್ದಾರೆ.
ಈ ಹಿಂದೆ ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ರೈಲುಗಳ ಮೇಲೆ ನಿರಂತರ ಕಲ್ಲು ತೂರಾಟ ಪ್ರಕರಣದಲ್ಲಿ ಪೋಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು. ರೈಲ್ವೆ ಹಳಿ ಮೇಲೆ ರಹಸ್ಯ ಕಣ್ಗಾವಲು ನಡೆಸಲು ವಿಶೇಷ ದಳವನ್ನು ನೇಮಿಸಲಾಗಿತ್ತು. ಇದೇ ವೇಳೆ ರೈಲಿಗೆ ಮತ್ತೆ ಕಲ್ಲು ತೂರಾಟ ನಡೆದಿದೆ. ಇದಕ್ಕೂ ಮುನ್ನ ಕಾಞಂಗಾಡ್‍ನಲ್ಲಿ ರಾಜಧಾನಿ ಎಕ್ಸ್‍ಪ್ರೆಸ್‍ಗೆ ಕಲ್ಲು ತೂರಾಟ ನಡೆದಿದ್ದು, ಗಾಜು ಒಡೆದಿತ್ತು.