ಮುಂಬೈ: ನಗರದಲ್ಲಿ ಝೀಕಾ ವೈರಸ್ ಸೋಂಕಿನ 2ನೇ ಪ್ರಕರಣ ದಾಖಲಾಗಿದೆ ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಮಂಗಳವಾರ ಹೇಳಿದೆ. ಆಗಸ್ಟ್ 23ರಂದು ಮೊದಲ ಪ್ರಕರಣ ದಾಕಲಾಗಿತ್ತು.
ಮುಂಬೈ: ನಗರದಲ್ಲಿ ಝೀಕಾ ವೈರಸ್ ಸೋಂಕಿನ 2ನೇ ಪ್ರಕರಣ ದಾಖಲಾಗಿದೆ ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಮಂಗಳವಾರ ಹೇಳಿದೆ. ಆಗಸ್ಟ್ 23ರಂದು ಮೊದಲ ಪ್ರಕರಣ ದಾಕಲಾಗಿತ್ತು.
2ನೇ ಸೋಂಕಿತ ರೋಗಿಯು ಪೂರ್ವ ಮುಂಬೈನ ಕುರ್ಲಾದ 15 ವರ್ಷದ ಬಾಲಕಿಯಾಗಿದ್ದಾಳೆ ಎಂದು ಬಿಎಂಸಿ ಹೇಳಿದೆ.
ಬಾಲಕಿ ಇತರೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಆಗಸ್ಟ್ 20ರಿಂದ ಜ್ವರ ಮತ್ತು ತಲೆನೋವು ಕಾಣಿಸಿಕೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಮಂಗಳವಾರ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು ಬಿಎಂಸಿ ತಿಳಿಸಿದೆ.
ಝೀಕಾ ವೈರಸ್ ಪ್ರಾಥಮಿಕವಾಗಿ ಈಡಿಸ್ ಸೊಳ್ಳೆಗಳಿಂದ ಹರಡುತ್ತದೆ. ಗರ್ಭಿಣಿಯರಿಗೆ ಸೋಂಕು ತಗುಲಿದರೆ ಮಗುವಿನಲ್ಲಿ ಕೆಲವು ಜನ್ಮತಹ ವೈಕಲ್ಯವನ್ನು ಉಂಟುಮಾಡಬಹುದು. ಜ್ವರ, ದದ್ದು, ತಲೆನೋವು, ಕೀಲು ನೋವು, ಕಣ್ಣು ಕೆಂಪಾಗುವುದು ಮತ್ತು ಸ್ನಾಯು ನೋವು ಇವೇ ಮುಂತಾದವು ಝಿಕಾ ಸೋಂಕಿತರ ರೋಗಲಕ್ಷಣಗಳಾಗಿವೆ. ಝೀಕಾ ಸೋಂಕಿಗೆ ಯಾವುದೇ ಲಸಿಕೆ ಅಥವಾ ಔಷಧಿ ಇಲ್ಲ.
ಚೆಂಬೂರಿನ 79 ವರ್ಷದ ವ್ಯಕ್ತಿಯೊಬ್ಬರು ಝೀಕಾ ವೈರಲ್ ಸೋಂಕಿಗೆ ಒಳಗಾದ ನಂತರ ನಗರದಲ್ಲಿ ಮೊದಲ ಪ್ರಕರಣ ವರದಿಯಾಗಿದೆ ಎಂದು ಆಗಸ್ಟ್ 23ರಂದು ಬಿಎಂಸಿ ಘೋಷಿಸಿತ್ತು. ಸದ್ಯ, ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ಅದು ಹೇಳಿದೆ.