ತಿರುವನಂತಪುರಂ: ಕೇರಳಕ್ಕೆ ಮಂಜೂರಾದ 2ನೇ ವಂದೇ ಭಾರತ್ ಎಕ್ಸ್ ಪ್ರೆಸ್ ನ ಮೊದಲ ಪ್ರಾಯೋಗಿಕ ಸಂಚಾರ ಪೂರ್ಣಗೊಂಡಿದೆ. ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏಳೂವರೆ ಗಂಟೆಯಲ್ಲಿ ರೈಲು ಕಾಸರಗೋಡು ತಲುಪಿತು. ನಿನ್ನೆ ಸಂಜೆ 4.05ಕ್ಕೆ ತಿರುವನಂತಪುರದಿಂದ ಹೊರಟ ರೈಲು ರಾತ್ರಿ 11.35ಕ್ಕೆ ಕಾಸರಗೋಡು ತಲುಪಿತು.
ನಿನ್ನೆ ಬೆಳಗ್ಗೆ ಚೆನ್ನೈನಿಂದ ಕೊಚುವೇಲಿಗೆ ಆಗಮಿಸಿದ ರೈಲು ಪಿಟ್ ಲೈನ್ ತಲುಪಿ ತಪಾಸಣೆ ಮುಗಿಸಿದ ಬಳಿಕ 4.05ಕ್ಕೆ ಪ್ರಾಯೋಗಿಕ ಓಡಾಟ ಆರಂಭವಾಯಿತು. ಇಂದು ಬೆಳಗ್ಗೆ 7 ಗಂಟೆಗೆ ಕಾಸರಗೋಡಿನಿಂದ ತಿರುವನಂತಪುರದವರೆಗೆ ಎರಡನೇ ಪ್ರಾಯೋಗಿಕ ಸಂಚಾರ ನಡೆಯಿತು. ತಿರುವನಂತಪುರಂ ತಲುಪಿದ ನಂತರ ರೈಲನ್ನು ಮತ್ತೆ ಕಾಸರಗೋಡಿಗೆ ಕಳಿಸಲಾಗುತ್ತದೆ. ಬಳಿಕ ಭಾನುವಾರ, ಪ್ರಧಾನ ಮಂತ್ರಿ ಆನ್‍ಲೈನ್‍ನಲ್ಲಿ ಪತಾಕೆ ಬೀಸಿ ಉದ್ಘಾಟಿಸಿದ ನಂತರ 2 ನೇ ವಂದೇಭಾರತ್ ಸೇವೆ ಪ್ರಾರಂಭವಾಗುತ್ತದೆ.
ರೈಲು ಕಾಸರಗೋಡಿನಿಂದ ಹೊರಡಲಿದೆ. ಮತ್ತು ಕಣ್ಣೂರು, ಕೋಯಿಕ್ಕೋಡ್, ಶೋರ್ನೂರು, ತ್ರಿಶೂರ್, ಎರ್ನಾಕುಳಂ ಜಂಕ್ಷನ್, ಆಲಪ್ಪುಳ, ಕೊಲ್ಲಂ ಮುಂತಾದ ನಿಲ್ದಾಣಗಳ ಮೂಲಕ ತಿರುವನಂತಪುರಂ ತಲುಪುತ್ತದೆ. ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಕಾಸರಗೋಡಿನಿಂದ ತಿರುವನಂತಪುರಕ್ಕೆ 8 ಗಂಟೆ 5 ನಿಮಿಷ ಬೇಕಾಗುತ್ತದೆ, ತಿರುವನಂತಪುರದಿಂದ ಕಾಸರಗೋಡಿಗೆ 7 ಗಂಟೆ 50 ನಿಮಿಷ ಪ್ರಯಾಣ. ನೂತನ ವಂದೇಭಾರತ್ ರೈಲು ಎಂಟು ಬೋಗಿಗಳನ್ನು ಹೊಂದಿದೆ.