ಕಾಸರಗೋಡು: ಗಾಂಧೀಜಿಯವರ 154ನೇ ಜನ್ಮದಿನಾಚರಣೆ ಅಂಗವಾಗಿ ಖಾದಿ ಮಂಡಳಿಯು ವಿವಿಧ ಕಾರ್ಯಕ್ರಮಗಳೊಂದಿಗೆ ಗಾಂಧಿ ಜಯಂತಿಯನ್ನು ಆಚರಿಸಲು ತೀರ್ಮಾನಿಸಿದೆ. ಖಾದಿ ಮೇಳಗಳ ಆಯೋಜನೆ, ರಸಪ್ರಶ್ನೆ ಸ್ಪರ್ಧೆ, ಖಾದಿ ಪ್ರಚಾರಕರಿಗೆ ಗೌರವಾರ್ಪಣೆ, ಪಿ.ಎಂ.ಇ.ಜಿ.ಪಿ, ನನ್ನ ಗ್ರಾಮ ಯೋಜನೆ ಮೇಳಗಳು, ಸಾಲ ಬಾಕಿ ತೆರವು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಗಾಂಧಿ ಜಯಂತಿ ಅಂಗವಾಗಿ ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 3 ರವರೆಗೆ ಅಧಿಕೃತ ಖಾದಿ ಅಂಗಡಿಗಳಿಂದ ಖರೀದಿಸುವ ಖಾದಿಬಟ್ಟೆಗಳ ಮೇಲೆ ಶೇಕಡಾ 30 ರಷ್ಟು ಸರ್ಕಾರಿ ರಿಯಾಯಿತಿ ಲಭ್ಯವಾಗಲಿದೆ ಎಂದು ಪರಕಟಣೆ ತಿಳಿಸಿದೆ.