ಪೆರ್ಲ: ಶ್ರೀ ಸಿದ್ಧಿ ವಿನಾಯಕ ಭಜನಾ ಸಮಿತಿ ಗೋಳಿತ್ತಾರು ಇದರ ಆಶ್ರಯದಲ್ಲಿ 35 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು
ಈ ಸಂದರ್ಭದಲ್ಲಿ ಎಣ್ಮಕಜೆ ಪಂಚಾಯತಿ ಅಧ್ಯಕ್ಷ ಸೋಮಶೇಖರ್ ಜೆ.ಎಸ್ ರವರು ಮಾತನಾಡಿ ಈ ಮಂದಿರಕ್ಕೆ ಕೆಲವು ವರ್ಷಗಳಿಂದ ಬರುತ್ತಿದ್ದು, ಪ್ರತಿ ವರ್ಷವು ಒಂದೊಂದು ಬದಲಾವಣೆ ಕಾಣುವುದು ಇಲ್ಲಿನ ವಿಶೇಷ. ಮುಂದಿನ ದಿನಗಳಲ್ಲಿ ನಡೆಯುವ ಶ್ರೀ ದೇವರ ಬೆಳ್ಳಿಯ ಛಾಯಾಚಿತ್ರ ಸಮರ್ಪಣ ಕಾರ್ಯದಲ್ಲಿ ನಾವು ನಿಮ್ಮೊಂದಿಗಿದ್ದು ದೇವರ ಕಾರ್ಯ ಮಾಡುತ್ತೇನೆ ಎಂದರು. ಪಂಚಾಯತ್ ಕಾರ್ಯದರ್ಶಿ ಗಿರಿಶ್ ಹಾಗೂ ಸಮಿತಿಯ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ಸಭೆಯಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಸಮಿತಿ ಅಧ್ಯಕ್ಷ ಕಮಲಾಕ್ಷ ಪೂಜಾರಿ ಕಾನ, ಮೈಂದ ಪೂಜಾರಿ ಕಾನ, ಹರೀಶ್ ಸೇರಾಜೆ, ಜನಾರ್ಧನ ರೈ ಸೇರಾಜೆ, ನಾರಾಯಣ ಪೂಜಾರಿ ಗುಂಡಿತ್ತಾರು, ಸಂಕಪ್ಪ ಶೆಟ್ಟಿ, ದಿವಾಕರ ನಾಯಕ್ ಇಡ್ಯಾಳ, ಕಬಡ್ಡಿ ಆಟಗಾರರಾದ ನಿತ್ಯಾನಂದ ರೈ, ವಸಂತ ಮಳಂಗರೆ ಉಪಸ್ಥಿತರಿದ್ದರು. ವಾಲಿಬಾಲ್ ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಎಸ್. ಎಸ್ ಎಚ್ ಎಸ್ ಶೇಣಿ ವಿದ್ಯಾರ್ಥಿಗಳಾದ ಆಶಿಕ್ ಕಾನ ಹಾಗೂ ಮನೀಶ್ ಗುಂಡಿತ್ತಾರು ಇವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ರವಿ ಎಸ್ ಎಂ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಜೀವ ಸುವರ್ಣ ಸಂಟನಡ್ಕ ವಂದಿಸಿದರು.