HEALTH TIPS

ಬಜೆಟ್‌ ಅಂದಾಜಿನ ಶೇ 36ಕ್ಕೆ ತಲುಪಿದ ವಿತ್ತೀಯ ಕೊರತೆ

              ವದೆಹಲಿ: ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯು 2023-24ರ ಏಪ್ರಿಲ್‌-ಆಗಸ್ಟ್‌ ಅವಧಿಯಲ್ಲಿ ವಾರ್ಷಿಕ ಬಜೆಟ್‌ ಅಂದಾಜಿನ ಶೇ 36ರಷ್ಟು ಆಗಿದೆ.

            2022-23ರ ಇದೇ ಅವಧಿಯಲ್ಲಿ ವಿತ್ತೀಯ ಕೊರತೆಯು ಬಜೆಟ್‌ ಅಂದಾಜಿನ ಶೇ 32.6ರಷ್ಟು ಇತ್ತು ಎಂದು ಲೆಕ್ಕಪತ್ರಗಳ ಮಹಾನಿಯಂತ್ರಕರು (ಸಿಜಿಎ) ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ಹೇಳಿವೆ.

ಮೌಲ್ಯದ ಲೆಕ್ಕದಲ್ಲಿ ವಿತ್ತೀಯ ಕೊರತೆಯು ಆಗಸ್ಟ್‌ ತಿಂಗಳ ಅಂತ್ಯಕ್ಕೆ ₹6.42 ಲಕ್ಷ ಕೋಟಿಯಷ್ಟು ಆಗಿದೆ. ವರಮಾನ ಮತ್ತು ವೆಚ್ಚದ ನಡುವಣ ಅಂತರವೇ ವಿತ್ತೀಯ ಕೊರತೆ.

             2023-24ನೇ ಹಣಕಾಸು ವರ್ಷಕ್ಕೆ ವಿತ್ತೀಯ ಕೊರತೆಯನ್ನು ಶೇ 5.9ಕ್ಕೆ ತಗ್ಗಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. 2022-23ರಲ್ಲಿ ವಿತ್ತೀಯ ಕೊರತೆಯು ಶೇ 6.4ರಷ್ಟು ಇತ್ತು.

              ನಿವ್ವಳ ತೆರಿಗೆ ವರಮಾನವು 2023-24ರ ಏಪ್ರಿಲ್‌-ಆಗಸ್ಟ್‌ ಅವಧಿಗೆ ₹8.03 ಲಕ್ಷ ಕೋಟಿ ಆಗಿದೆ. ಬಜೆಟ್‌ ಅಂದಾಜಿನ ಶೇ 34.5ರಷ್ಟು. 2022-23ರ ಆಗಸ್ಟ್‌ ಅಂತ್ಯದಲ್ಲಿ ಶೇ 36.2ರಷ್ಟು ಆಗಿತ್ತು.

              ಕೇಂದ್ರದ ಒಟ್ಟು ವೆಚ್ಚವು ಬಜೆಟ್‌ ಅಂದಾಜಿನ ಶೇ 37.1ರಷ್ಟು (₹16.71 ಲಕ್ಷ ಕೋಟಿ) ಆಗಿದೆ. ಹಿಂದಿನ ಅವಧಿಯಲ್ಲಿ ಶೇ 35.2ರಷ್ಟು ಇತ್ತು ಎಂದು ಸಿಜಿಎ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries