ತಿರುವನಂತಪುರಂ: ತಿರುವನಂತಪುರಂ ಮೃಗಾಲಯದಲ್ಲಿ ಗಂಡು ಸಿಂಹವೊಂದು ಸಾವನ್ನಪ್ಪಿದೆ. ಅನಾರೋಗ್ಯದಿಂದ ಸಿಂಹ ಸಾವನ್ನಪ್ಪಿದೆ. ಇನ್ನು ಮೃಗಾಲಯದಲ್ಲಿ ಮೂರು ಸಿಂಹಗಳು ಮಾತ್ರ ಉಳಿದಿವೆ.
ತಿರುವನಂತಪುರಂ ಮೃಗಾಲಯದಲ್ಲಿ ಪ್ರಾಣಿಗಳು ನಿರಂತರವಾಗಿ ಸಾಯುತ್ತಿವೆ. ಈ ವೇಳೆ ಸಿಂಹವೂ ಸಾವನ್ನಪ್ಪಿರುವುದರಿಂದ ಭಾರೀ ಅನುಮಾನ ಮೂಡಿದೆ. ಯಾವುದಾದರೂ ರೋಗ, ಅಥವಾ ಸೋಂಕಿನ ಕಾರಣವಿರುವುದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.