ಪುಣೆ (PTI): ಆರ್‌ಎಸ್‌ಎಸ್‌ನ ಮೂರು ದಿನಗಳ ಸಮನ್ವಯ ಸಭೆಯು ಮಹಾರಾಷ್ಟ್ರದ ಪುಣೆಯಲ್ಲಿ ಗುರುವಾರ ಆರಂಭವಾಯಿತು. ಆರ್‌ಎಸ್‌ಎಸ್‌ನ 36 ಅಂಗಸಂಸ್ಥೆಗಳ 267 ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪುಣೆ (PTI): ಆರ್‌ಎಸ್‌ಎಸ್‌ನ ಮೂರು ದಿನಗಳ ಸಮನ್ವಯ ಸಭೆಯು ಮಹಾರಾಷ್ಟ್ರದ ಪುಣೆಯಲ್ಲಿ ಗುರುವಾರ ಆರಂಭವಾಯಿತು. ಆರ್‌ಎಸ್‌ಎಸ್‌ನ 36 ಅಂಗಸಂಸ್ಥೆಗಳ 267 ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಭಾರತ ಮಾತೆಯ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಸಭೆಗೆ ಚಾಲನೆ ನೀಡಿದರು.
ವಿಶ್ವ ಹಿಂದೂ ಪರಿಷತ್, ರಾಷ್ಟ್ರೀಯ ಸೇವಾ ಭಾರ್ತಿ, ವನವಾಸಿ ಕಲ್ಯಾಣ ಆಶ್ರಮ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಭಾರತೀಯ ಕಿಸಾನ್ ಸಂಘ, ಭಾರತೀಯ ಮಜ್ದೂರ್ ಸಂಘ ಮತ್ತು ಸಂಸ್ಕೃತಿ ಭಾರತಿ ಸಂಘಟನೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರ್‌ಎಸ್‌ಎಸ್‌ನ ಪ್ರಕಟಣೆ ತಿಳಿಸಿದೆ.
ಸಮಾಜ ಮತ್ತು ದೇಶದ ಸದ್ಯದ ಘಟನಾವಳಿಗಳು, ರಾಷ್ಟ್ರೀಯ ಭದ್ರತೆ, ಶಿಕ್ಷಣ, ದೇಶಸೇವೆ ಹಾಗೂ ಆರ್ಥಿಕತೆ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಪರಸರ ಸ್ನೇಹಿ ಜೀವನಶೈಲಿ, ಸಾಮಾಜಿಕ ಸಾಮರಸ್ಯದಂಥ ವಿಷಯಗಳ ಕುರಿತೂ ಚರ್ಚೆ ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.