ನವದೆಹಲಿ: ಗುಜರಾತ್‌ನಲ್ಲಿರುವ ಕಾಕರಾಪಾರ್‌ನ ಮೂರನೇ ಹಂತದ ಪರಮಾಣು ವಿದ್ಯುತ್ ಸ್ಥಾವರ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಆರಂಭಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ನವದೆಹಲಿ: ಗುಜರಾತ್‌ನಲ್ಲಿರುವ ಕಾಕರಾಪಾರ್‌ನ ಮೂರನೇ ಹಂತದ ಪರಮಾಣು ವಿದ್ಯುತ್ ಸ್ಥಾವರ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಆರಂಭಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
2020ರ ಜುಲೈನಲ್ಲಿ ಕಾಕರಾಪಾರ್‌ನ ಮೂರನೇ ಹಂತದ ಪರಮಾಣು ವಿದ್ಯುತ್ ಸ್ಥಾವರದ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲಾಗಿತ್ತು. ಈ ಸ್ಥಾವರವು 700 ಮೆಗಾವಾಟ್ ವಿದ್ಯುತ್ ಉತ್ಪಾದನೆಯ ಸಾಮರ್ಥ್ಯದ್ದಾಗಿದೆ.
ಕಾಕರಾಪಾರ್‌ನ ಮೊದಲೆರಡು ಸ್ಥಾವರಗಳು (ಕೆಎಪಿಎಸ್-1 ಮತ್ತು ಕೆಎಪಿಎಸ್-2) ಈಗಾಗಲೇ ಕಾರ್ಯಾಚರಣೆ ನಡೆಸುತ್ತಿವೆ. ಇವು 220 ಮೆಗಾವಾಟ್ ವಿದ್ಯುತ್ ಉತ್ಪಾದನೆಯ ಸಾಮರ್ಥ್ಯ ಹೊಂದಿವೆ.
ಕಾಕರಾಪಾರ್‌ನಲ್ಲಿ ಮತ್ತೊಂದು ಸ್ಥಾವರವನ್ನು (ಕೆಎಪಿಪಿ -4) ಸಹ ನಿರ್ಮಿಸಲಾಗುತ್ತಿದ್ದು, 2024ರ ಮಾರ್ಚ್ ವೇಳೆಗೆ ಇದು ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆಯಿದೆ.