HEALTH TIPS

ಲೋಕಸಭೆಯಲ್ಲಿ ಚಂದ್ರಯಾನ-3 ಯಶಸ್ಸಿನ ಲಾಭಕ್ಕೆ ಪೈಪೋಟಿ

              ವದೆಹಲಿ: ಚಂದ್ರಯಾನ -3 ರ ಯಶಸ್ಸಿನ ಬಗ್ಗೆ ಲೋಕಸಭೆಯಲ್ಲಿ ಗುರುವಾರ ನಡೆದ ಚರ್ಚೆಯ ಸಂದರ್ಭದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ವಾಗ್ವಾದ ನಡೆಯಿತು.

            ಯೋಜನೆ ಒಬ್ಬ ನಿರ್ದಿಷ್ಟ ವ್ಯಕ್ತಿಯ ಪ್ರಯತ್ನಗಳ ಫಲಿತಾಂಶವಲ್ಲ ಎಂದು 'ಇಂಡಿಯಾ' ಸದಸ್ಯರು ಹೇಳಿದರೆ, 'ನೆಹರೂ ಭಜನೆ'ಯಲ್ಲಿ ತೊಡಗಿದ್ದಾರೆ ಎಂದು ಬಿಜೆಪಿ ತಿರುಗೇಟು ನೀಡಿತು.

          ಇಡೀ ದಿನ ನಡೆದ ಚರ್ಚೆಯಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಬಿರುಸಿನ ವಾಗ್ವಾದ ನಡೆಯಿತು. ವೈಜ್ಞಾನಿಕ ಮನೋಭಾವವನ್ನು ಉತ್ತೇಜಿಸಲು ಹಾಗೂ ಧರ್ಮ ಮತ್ತು ವಿಜ್ಞಾನವನ್ನು ಪ್ರತ್ಯೇಕವಾಗಿಡುವಂತೆ ವಿರೋಧ ಪಕ್ಷದ ಸದಸ್ಯರು ಒತ್ತಿ ಹೇಳಿದರು.

             ಬಾಹ್ಯಾಕಾಶ ಕ್ಷೇತ್ರದಲ್ಲಿ ಯಶಸ್ಸು ಮತ್ತು ಇತರ ಸಾಧನೆಗಳ ಬಗ್ಗೆ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಾರತವು ಈವರೆಗೆ ಉಡಾವಣೆ ಮಾಡಿದ 424 ವಿದೇಶಿ ಉಪಗ್ರಹಗಳಲ್ಲಿ ಪೈಕಿ 389 ಅನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕಳೆದ ಒಂಬತ್ತು ವರ್ಷಗಳಲ್ಲಿ ಮಾಡಲಾಗಿದೆ. ವಿದೇಶಿ ಉಪಗ್ರಹಗಳ ಯಶಸ್ವಿ ಉಡಾವಣೆಯೊಂದಿಗೆ, ಭಾರತದ ಬಾಹ್ಯಾಕಾಶ ಕ್ಷೇತ್ರವು ವೇಗವಾಗಿ ವಿಶ್ವದಲ್ಲಿ ಪ್ರಮುಖ ಸ್ಥಾನವನ್ನು ಪಡೆಯುತ್ತಿದೆ ಎಂದು ಹೇಳಿದರು.

               'ಸಂಸತ್ತಿನ ಈ ವಿಶೇಷ ಅಧಿವೇಶನವು 'ನಾರಿ ಶಕ್ತಿ ವಂದನ್ ಅಧಿಯಮ್‌'ಗೆ ಸಮರ್ಪಿತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಮಸೂದೆಯನ್ನು ಇಸ್ರೊದ ಮಹಿಳಾ ವಿಜ್ಞಾನಿಗಳಿಗೆ ಮತ್ತು ದೇಶದ ಮಹಿಳಾ ವೈಜ್ಞಾನಿಕ ಸಮುದಾಯಕ್ಕೆ ರಾಷ್ಟ್ರವು ನೀಡಿದ ಉಡುಗೊರೆ ಎಂದು ಪರಿಗಣಿಸುತ್ತೇನೆ. ವಿಜ್ಞಾನವು ಎಷ್ಟೇ ಪ್ರಗತಿ ಸಾಧಿಸಿದರೂ ಪರವಾಗಿಲ್ಲ, ಸಂಸ್ಕೃತಿ ಮತ್ತು ಮೌಲ್ಯಗಳಿಲ್ಲದೆ ಅದು ಅಪೂರ್ಣವಾಗಿ ಉಳಿಯುತ್ತದೆ' ಎಂದು ಹೇಳಿದರು.

            ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ವಿಜ್ಞಾನವನ್ನು ಮೂಢನಂಬಿಕೆಯೊಂದಿಗೆ ಗೊಂದಲಗೊಳಿಸಬಾರದು ಎಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries