ತಿರುವನಂತಪುರಂ: ಜ್ಯೂಸ್ ಮತ್ತು ಮದ್ಯದಲ್ಲಿ ವಿಷ ಬೆರೆಸಿ ಪ್ರಿಯಕರನನ್ನು ಕೊಂದ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದೆ.
ನವೆಂಬರ್ 3 ರಂದು ವಿಚಾರಣೆ ಆರಂಭವಾಗಲಿದೆ. ಕೇರಳದಲ್ಲಿ ವಿಚಾರಣೆ ನಡೆಸಬಹುದೇ ಎಂಬುದು ಸೇರಿದಂತೆ ಹಲವು ವಿಷಯಗಳ ಕುರಿತು ವಾದ-ಪ್ರತಿವಾದಗಳು ನಡೆಯಲಿವೆ. ಗ್ರೀಷ್ಮಾ ಸೇರಿದಂತೆ ಮೂವರು ಆರೋಪಿಗಳು ಇಂದು ಹಾಜರಾಗಿದ್ದರು. ಶರೋನ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಗ್ರೀಷ್ಮಾಗೆ ಹೈಕೋರ್ಟ್ ಮೊನ್ನೆ ಜಾಮೀನು ನೀಡಿತ್ತು.
ಈ ಪ್ರಕರಣದಲ್ಲಿ ಗ್ರೀಷ್ಮಾ|ಳನ್ನು ಅಕ್ಟೋಬರ್ 2022 ರಲ್ಲಿ ಬಂಧಿಸಲಾಯಿತು. ಸಂಬಂಧದಿಂದ ಹಿಂದೆ ಸರಿಯಲು ನಿರಾಕರಿಸಿದ ಬಳಿಕ ಆಕೆ ವಿಷ ಬೆರೆಸಿ ಪ್ರಿಯಕರನನ್ನು ಹತ್ಯೆ ಮಾಡಿದ್ದಳು. ಸೆಪ್ಟೆಂಬರ್ 14ರಂದು ಶರೋನ್ ಮನೆಗೆ ಬಂದಾಗ ಗ್ರೀಷ್ಮಾ ವಿಷ ಬೆರೆಸಿ ಕೃತ್ಯವೆಸಗಿದ್ದಳು. ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 10 ದಿನಗಳ ನಂತರ ಶರೋನ್ ಚಿಕಿತ್ಸೆ ಪಡೆದರೂ ವಿಫಲಗೊಂಡು ನಿಧನರಾದರು. ಮೊದಲಿಗೆ ಇದು ಸಾಮಾನ್ಯ ಸಾವು ಎಂದು ಭಾವಿಸಲಾಗಿತ್ತು, ಆದರೆ ತನಿಖೆಯ ವೇಳೆ ಆಘಾತಕಾರಿ ಮಾಹಿತಿ ಹೊರಬಿದ್ದಿತ್ತು.
ಗ್ರೀಷ್ಮಾಳ ತಾಯಿ ಸಿಂಧು ಮತ್ತು ಚಿಕ್ಕಪ್ಪ ನಿರ್ಮಲ್ ಕುಮಾರ್ ಅವರನ್ನು ಅಪರಾಧದಲ್ಲಿ ಸಹಾಯಕರಾದ್ದಕ್ಕೆ ಮತ್ತು ಸಾಕ್ಷ್ಯ ನಾಶಪಡಿಸಿದ ಆರೋಪದ ಮೇಲೆ ಪೋಲೀಸರು ಬಂಧಿಸಿದ್ದಾರೆ. ಇಬ್ಬರೂ ಆರೋಪಿಗಳಿಗೆ ಈ ಹಿಂದೆ ಜಾಮೀನು ನೀಡಲಾಗಿತ್ತು. ತಮಿಳುನಾಡು ವ್ಯಾಪ್ತಿಯಲ್ಲಿ ಅಪರಾಧ ನಡೆದಿದ್ದು, ತಮಿಳುನಾಡಿನಲ್ಲೇ ವಿಚಾರಣೆ ನಡೆಸಬೇಕು ಎಂದು ತಿಳಿಸಿ ಗ್ರೀಷ್ಮಾ ಸಲ್ಲಿಸಿರುವ ಮತ್ತೊಂದು ಅರ್ಜಿ ಹೈಕೋರ್ಟ್‍ನ ಪರಿಗಣನೆಯಲ್ಲಿದೆ. ಹೈಕೋರ್ಟ್ ನಂತರ ಅರ್ಜಿಯ ವಿಚಾರಣೆ ನಡೆಸಲಿದೆ.