ಬೆಂಗಳೂರು: ಚಂದ್ರಯಾನ 3ರ 14 ದಿನಗಳ ಯಶಸ್ವಿ ಕಾರ್ಯಾಚರಣೆ ಬಳಿಕ 14 ದಿನಗಳ ಸುದೀರ್ಘ ನಿದ್ರೆಗೆ ಜಾರಿದ್ದ ವಿಕ್ರಮ್ ಲ್ಯಾಂಡರ್, ಪ್ರಗ್ಯಾನ್ ರೋವರ್ ಗಳನ್ನು ಎಬ್ಬಿಸುವ ಮೊದಲ ಪ್ರಯತ್ನ ವಿಫಲವಾಗಿದೆ.
ಶುಕ್ರವಾರ ಚಂದ್ರನ ಮೇಲಿರುವ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಗೆ ಬೆಂಗಳೂರಿನ ಇಸ್ರೋ ನಿಯಂತ್ರಣ ಕೇಂದ್ರದಿಂದ ವಿಜ್ಞಾನಿಗಳು ಸಂದೇಶ ರವಾನಿಸಿದ್ದು, ಈ ಸಂದೇಶಕ್ಕೆ ಲ್ಯಾಂಡರ್ ಮತ್ತು ರೋವರ್ ನಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿದುಬಂದಿದೆ. ಚಂದ್ರನ ಮೇಲೆ ಇಳಿದಿರುವ ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಜತೆಗಿನ ಸಂಪರ್ಕ ಮರುಸ್ಥಾಪಿಸಲು ಇಸ್ರೋ ಶುಕ್ರವಾರ ಪ್ರಯತ್ನಿಸಿತು. ಇದು ಫಲಕೊಟ್ಟಿಲ್ಲ. ಆದರೂ, ಸಂರ್ಪಕ ಸಾಧನೆಯ ಪ್ರಯತ್ನ ಮುಂದುವರಿದಿದೆ.
ಚಂದ್ರಯಾನ 3ರ (Chandrayaan 3) ಲ್ಯಾಂಡರ್ ಮತ್ತು ರೋವರ್ ಅನ್ನು ಪುನಃ ಸಕ್ರಿಯಗೊಳಿಸುವ ಪ್ರಯತ್ನಕ್ಕೆ ಶುಕ್ರವಾರ (ಸೆ.22) ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಆದಾಗ್ಯೂ, ಪ್ರಯತ್ನ ಮುಂದುವರಿದಿದೆ. ಚಂದ್ರಯಾನ 3ರ ಲ್ಯಾಂಡರ್ ವಿಕ್ರಮ್ ಮತ್ತು ರೋವರ್ ಪ್ರಜ್ಞಾನ್ ಜತೆಗೆ ಸಂಪರ್ಕ ಸಾಧಿಸುವ ಕೆಲಸ ಪ್ರಗತಿಯಲ್ಲಿದೆ ಎಂದು ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಹೇಳಿದೆ.ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್‌ನ ಎಚ್ಚರ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಸಂಪರ್ಕ ಸಾಧಿಸುವ ಪ್ರಯತ್ನಗಳನ್ನು ಮಾಡಲಾಗಿದೆ. ಸದ್ಯಕ್ಕೆ ಅವುಗಳಿಂದ ಯಾವುದೇ ಸಿಗ್ನಲ್‌ಗಳು ಬಂದಿಲ್ಲ. ಸಂಪರ್ಕವನ್ನು ಸ್ಥಾಪಿಸುವ ಪ್ರಯತ್ನಗಳು ಮುಂದುವರಿಯುತ್ತವೆ ಎಂದು ಟ್ವಿಟರ್ ನಲ್ಲಿ ಇಸ್ರೋ ಹೇಳಿಕೊಂಡಿದೆ.
ಲ್ಯಾಂಡರ್ ವಿಕ್ರಮ್ ಮತ್ತು ರೋವರ್ ಪ್ರಜ್ಞಾನ್ ಎರಡನ್ನೂ ಸೆಪ್ಟೆಂಬರ್ 2 ರಂದು "ಸುರಕ್ಷಿತವಾಗಿ ನಿಲ್ಲಿಸಲಾಯಿತು" ಮತ್ತು ಚಂದ್ರನ ರಾತ್ರಿ ಪ್ರಾರಂಭವಾದ ನಂತರ ಸ್ಲೀಪ್ ಮೋಡ್‌ನಲ್ಲಿ ಇರಿಸಲಾಗಿತ್ತು. ಚಂದ್ರನ ಮೇಲೆ ಒಂದು ದಿನವು ಭೂಮಿಯ ಮೇಲಿನ 14 ದಿನಗಳಿಗೆ ಸಮನಾಗಿರುತ್ತದೆ. -200 ಡಿಗ್ರಿ ತಾಪಮಾನದಿಂದ ನೌಕೆಗಳನ್ನು ಪುನಃ ಕಾರ್ಯಾಚರಣೆಗಿಳಿಸುವುದು ಕಷ್ಟಕರ
ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಸುಮಾರು ಎರಡು ವಾರಗಳಿಂದ ಗಾಢ ನಿದ್ದೆಯಲ್ಲಿವೆ. ಇದು ಬಹುತೇಕ ಫ್ರೀಜರ್‌ನಲ್ಲಿಟ್ಟು ಬಳಿಕ ಪರೀಕ್ಷಿಸಿ ಅದನ್ನು ಬಳಸಲು ಪ್ರಯತ್ನಿಸುವಂತಿದೆ. ತಾಪಮಾನವು -150 ಡಿಗ್ರಿ ಸೆಲ್ಸಿಯಸ್ ಮೀರಿ ಹೋಗುವ ವಾತಾವರಣ ಅದು. ಆ ಪರಿಸ್ಥಿತಿಯಲ್ಲಿ ಬ್ಯಾಟರಿ, ಇಲೆಕ್ಟ್ರೋನಿಕ್ಸ್ ಮತ್ತು ಆ ಮೆಕಾನಿಸಂ ಹೇಗೆ ಉಳಿಯಲು ಸಾಧ್ಯ ಎಂದು ಇಸ್ರೋದ ಮಾಜಿ ಅಧ್ಯಕ್ಷ ಜಿ ಮಾಧವನ್ ನಾಯರ್ ಕಳವಳ ವ್ಯಕ್ತಪಡಿಸಿದರು.
ಒಮ್ಮೆ ಇದು ಕಾರ್ಯಗತಗೊಂಡರೆ, ಮುಂದಿನ 14 ದಿನಗಳಲ್ಲಿ ನಾವು ಸ್ವಲ್ಪ ದೂರದವರೆಗೆ ಚಲಿಸಬಹುದು ಮತ್ತು ಚಂದ್ರನ ದಕ್ಷಿಣ ಧ್ರುವದ ಬಳಿ ಚಂದ್ರನ ಮೇಲ್ಮೈಯಲ್ಲಿ ಹೆಚ್ಚಿನ ಡೇಟಾವನ್ನು ಸಂಗ್ರಹಿಸಬಹುದು ಎಂದು ಅವರು ವಿವರಿಸಿದರು.
ಪ್ರಾಥಮಿಕ ಗುರಿ ಸಂಪೂರ್ಣವಾಗಿ ಸಾಧಿಸಿರುವ ಚಂದ್ರಯಾನ3 ಯೋಜನೆಭಾರತದ ವಿಕ್ರಮ್ ಲ್ಯಾಂಡರ್ ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವದ ಬಳಿ ಸ್ಪರ್ಶಿಸಿತು. ಅದಾಗಿ, ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್‌ನ ಚಂದ್ರಯಾನ-3 ಮಿಷನ್‌ನ ಮುಖ್ಯ ಉದ್ದೇಶಗಳಲ್ಲಿ ಒಂದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು. ಬಳಿಕ 14 ದಿನಗಳ ಕಾಲ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಕಾರ್ಯ ನಿರ್ವಹಣೆ ಮಾಡಿ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿತ್ತು.