HEALTH TIPS

ಮನೆ ಕಟ್ಟಿಸಬೇಕೆಂಬ ಕನಸು ಕಾಣುತ್ತಿರುವವರಿಗೆ ಕಹಿ ಸುದ್ದಿ; ಭಾರತದಲ್ಲಿ ಸಿಮೆಂಟ್​ ಬೆಲೆ 40 ರೂ. ಏರಿಕೆ ಸಾಧ್ಯತೆ!

             ವದೆಹಲಿ: ಮನೆ, ಕಾಂಪ್ಲೆಕ್ಸ್​ ಸೇರಿದಂತೆ ನಿರ್ಮಾಣ ಯೋಜನೆ ಹೊಂದಿರುವವರಿಗೆ ಇಲ್ಲೊಂದು ಕಹಿ ಸುದ್ದಿ ಇದೆ. ಮತ್ತೊಮ್ಮೆ ಬೆಲೆ ಏರಿಕೆ ಮಾಡಲು ಸಿಮೆಂಟ್​ ಕಂಪನಿಗಳು ಸಿದ್ಧತೆ ನಡೆಸಿವೆ. ಅಕ್ಟೋಬರ್​ 1ರಿಂದ ದಕ್ಷಿಣ ಮತ್ತು ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಸಿಮೆಂಟ್​ ಬೆಲೆ ಹೆಚ್ಚಾಗಲಿದೆ ಎಂದು ಮೂಲಗಳು ತಿಳಿಸಿವೆ.

                ದಕ್ಷಿಣ ಭಾರತದಲ್ಲಿ ಸಿಮೆಂಟ್​ ದರ ಚೀಲಕ್ಕೆ 30-40 ರೂ. ಮತ್ತು ಉತ್ತರ ಭಾಗದಲ್ಲಿ ಚೀಲಕ್ಕೆ 10ರಿಂದ 20 ರೂ.ವರೆಗೆ ಏರಿಕೆಯಾಗುವ ಸಾಧ್ಯತೆ ಇದೆ. ಸೆಪ್ಟೆಂಬರ್​ ತಿಂಗಳ ಆರಂಭದಲ್ಲಿ ಸಿಮೆಂಟ್​ ಕಂಪನಿಗಳು ಪ್ರತಿ ಚೀಲಕ್ಕೆ 10ರಿಂದ 35 ರೂ. ವರೆಗೆ ಏರಿಕೆ ಮಾಡಿದ್ದವು. ದೇಶದ ಎಲ್ಲಾ ಪ್ರದೇಶಗಳಲ್ಲಿ ಹೊಸ ದರ ಅನ್ವಯವಾಗಿತ್ತು.

               ಆಗಸ್ಟ್​ನಲ್ಲಿ ಸಿಮೆಂಟ್​ ಬೆಲೆ ಶೇ. 2ರವರೆಗೂ ಹೆಚ್ಚಾಗಿತ್ತು. ಬೇಡಿಕೆ ಹೆಚ್ಚಿರುವುದೇ ಸಿಮೆಂಟ್​ ಬೆಲೆ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. ದೇಶದಲ್ಲಿ ಕಡಿಮೆ ಮಳೆಯಿಂದಾಗಿ ಕಟ್ಟಡ ಕಾಮಗಾರಿಗಳು ಹೆಚ್ಚುತ್ತಿವೆ. ಹೀಗಾಗಿ ಸಿಮೆಂಟ್​ ಬೇಡಿಕೆ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದೆ ಎನ್ನಲಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries