HEALTH TIPS

ಕೇವಲ 5000 ರೂ. ಸಾಲ: ಲೋನ್​ ಆಯಪ್​ ಕಾಟಕ್ಕೆ ಬೇಸತ್ತು ಪ್ರಾಣ ಬಿಟ್ಟ ವ್ಯಕ್ತಿ, ಮೊನ್ನೆಯಷ್ಟೇ ಇಡೀ ಕುಟುಂಬ ನಾಶ

               ತಿರುವನಂತಪುರ: ಇತ್ತೀಚಿನ ದಿನಗಳಲ್ಲಿ ಸಾಲದ ಆಯಪ್​ಗಳು​ ಮತ್ತು ರಮ್ಮಿಯಂತಹ ಆನ್​ಲೈನ್​ ಜೂಜಾಟಗಳು ಬಡ ಮತ್ತು ಮಧ್ಯಮ ಕುಟುಂಬಗಳ ಕತ್ತು ಹಿಸುಕುತ್ತಿವೆ. ಆನ್​ಲೈನ್​ನಲ್ಲಿ ನಡೆಯುವ ಈ ವಂಚನೆಯ ಚಕ್ರವ್ಯೂಹಕ್ಕೆ ಸಿಲುಕಿ ಸಾಕಷ್ಟು ಮಂದಿ ಮನೆ, ಜಮೀನು ಮಾರಿಕೊಂಡು ಬೀದಿಗೆ ಬಿದ್ದಿದ್ದಾರೆ.

                ಅಲ್ಲದೆ, ಸಾಲದ ಕಿರುಕುಳ ತಾಳಲಾರದೇ ಬಲಿಯಾಗುತ್ತಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೆಲ್ಲ ಕೂಡಲೇ ಕಡಿವಾಣ ಹಾಕದಿದ್ದರೆ, ಇನ್ನುಷ್ಟು ಅಮಾಯಕ ಜೀವಗಳು ಬಲಿಯಾಗುತ್ತವೆ.

            ಆನ್​ಲೈನ್​ ಸಾಲದ ಕಿರುಕುಳಕ್ಕೆ ಇದೀಗ ಇನ್ನೊಂದು ಜೀವ ಬಲಿಯಾಗಿದೆ. ಕೇವಲ 5 ಸಾವಿರ ರೂಪಾಯಿ ಸಾಲಕ್ಕೆ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಈ ಘಟನೆ ಕೇರಳದ ವಯನಾಡು ಜಿಲ್ಲೆಯ ಸುಲ್ತಾನ್​ ಬಥೇರಿಯಲ್ಲಿ ನಡೆದಿದೆ. ಮೊನ್ನೆಯಷ್ಟೇ ಕೊಚ್ಚಿಯಲ್ಲಿ ಇಡೀ ಕುಟುಂಬ ಇದೇ ಆನ್​ಲೈನ್​ ಲೋನ್​ ಆಯಪ್​ ಕಿರುಕುಳಕ್ಕೆ ಬಲಿಯಾಗಿತ್ತು.

              ಮೃತ ವ್ಯಕ್ತಿಯನ್ನು ಬಥೇರಿ ನಿವಾಸಿ ಅಜಯ್​ರಾಜ್ (44)​ ಎಂದು ಗುರುತಿಸಲಾಗಿದೆ. ಸೆ. 15ರಂದು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಸೆ. 14ರಿಂದ ನಾಪತ್ತೆಯಾಗಿದ್ದರು. ಸೆ. 15ರ ಶುಕ್ರವಾರ ಅಜಯ್​ರಾಜ್​ ಮನೆಯ ಸಮೀಪ ಆತನ ಮೃತದೇಹವನ್ನು ಸ್ಥಳೀಯರು ಮತ್ತು ಕುಟುಂಬಸ್ಥರು ಪತ್ತೆಹಚ್ಚಿದರು. ಆತನ ಮೊಬೈಲ್​ ಫೋನ್​ ಅನ್ನು ಪರಿಶೀಲಿಸುತ್ತಿರುವಾಗಿ ಪೊಲೀಸರು ತಿಳಿಸಿದ್ದಾರೆ.

               ಪ್ರಾಥಮಿಕ ತನಿಖೆಯ ಪ್ರಕಾರ ಅಜಯ್​ರಾಜ್​ ಲೋನ್​ ಆಯಪ್​ನಲ್ಲಿ 5000 ರೂ. ಸಾಲ ಪಡೆದಿದ್ದರು ಎನ್ನಲಾಗಿದೆ. ಆತನ ಕಾಲ್​ ಲೀಸ್ಟ್​ನಲ್ಲಿದ್ದ ಕೆಲ ಸ್ನೇಹಿತರು ಮತ್ತು ಸಂಬಂಧಿಕರು ತಮ್ಮ ಮೊಬೈಲ್​ಗಳಲ್ಲಿ ಬೆದರಿಕೆ ಸಂದೇಶ ಮತ್ತು ಅಶ್ಲೀಲ ಚಿತ್ರಗಳನ್ನು ಸ್ವೀಕರಿಸಿರುವುದಾಗಿ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಕೇರಳದ ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆಯಾಗಿದ್ದರು. ಈ ಘಟನೆ ಎರ್ನಾಕುಲಂನ ಕದಮಕ್ಕುಡಿಯಲ್ಲಿ ನಡೆದಿತ್ತು. ಮೃತರನ್ನು ಕದಮಕ್ಕುಡಿ ನಿವಾಸಿ ನಿಜೋ (39), ಆತನ ಪತ್ನಿ ಶಿಲ್ಪ (29) ಮತ್ತು ಮಕ್ಕಳಾದ ಆಬಲ್​ (7) ಮತ್ತು ಆಯರೂನ್​ (5) ಎಂದು ಗುರುತಿಸಲಾಗಿದೆ. ಆರ್ಥಿಕ ಸಮಸ್ಯೆಯೇ ಸಾವಿಗೆ ಕಾರಣ ಎಂದು ಹೇಳಲಾಗಿತ್ತು. ಇದೀಗ ಇಡೀ ಕುಟುಂಬದ ದುರಂತ ಸಾವಿನ ಹಿಂದೆ ಲೋನ್​ ಗ್ಯಾಂಗ್​ನ ಕರಾಳ ಛಾಯೆ ಇರುವುದು ಬಯಲಾಗಿದೆ. ಆನ್​​ಲೈನ್​ ಲೋನ್​ ವಂಚನೆ ಜಾಲಕ್ಕೆ ಸಿಲುಕಿ ಇಡೀ ಕುಟುಂಬ ನಾಶವಾಗಿರುವುದು ಪೊಲೀಸ್​ ತನಿಖೆಯಿಂದ ಬಯಲಾಗಿದೆ.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries