ನವದೆಹಲಿ: ಟಾಟಾ ಸಂಸ್ಥೆಯು ಭಾರತದ ದೊಡ್ಡ ಆಹಾರ ಸಂಸ್ಥೆಗಳ್ಲೊಂದಾದ ಹಲ್ದಿರಾಮ್ಸ್ ಕಂಪನಿಯ ಶೇ.51ರಷ್ಟು ಶೇರನ್ನು ಖರೀದಿಸುತ್ತಿದೆ ಎಂದು ವರದಿಯಾಗಿತ್ತು. ಆದರೆ ಈಗ ಕುರಿತಾಗಿ ಹಲ್ದಿರಾಮ್ಸ್ ಸಂಸ್ಥೆಯೇ ಇದರ ಬಗ್ಗೆ ಸ್ಪಷ್ಟನೆ ನಿಡಿದೆ.
ನವದೆಹಲಿ: ಟಾಟಾ ಸಂಸ್ಥೆಯು ಭಾರತದ ದೊಡ್ಡ ಆಹಾರ ಸಂಸ್ಥೆಗಳ್ಲೊಂದಾದ ಹಲ್ದಿರಾಮ್ಸ್ ಕಂಪನಿಯ ಶೇ.51ರಷ್ಟು ಶೇರನ್ನು ಖರೀದಿಸುತ್ತಿದೆ ಎಂದು ವರದಿಯಾಗಿತ್ತು. ಆದರೆ ಈಗ ಕುರಿತಾಗಿ ಹಲ್ದಿರಾಮ್ಸ್ ಸಂಸ್ಥೆಯೇ ಇದರ ಬಗ್ಗೆ ಸ್ಪಷ್ಟನೆ ನಿಡಿದೆ.
ಸಂಸ್ಥೆಯ 51% ಪಾಲನ್ನು ಮಾರಾಟ ಮಾಡುವ ಕುರಿತಾ ಬಂದಿರುವ ವರದಿಗಳನ್ನು ನಿರಾಕರಿಸುತ್ತೇವೆ. ಮಾರಟದ ಕುರಿತು ಟಾಟಾ ಗ್ರಾಹಕರ ಉತ್ಪನ್ನದ ಜತೆ ನಾವು ಯಾವುದೇ ಚರ್ಚೆಯಲ್ಲಿ ತೊಡಗಿಲ್ಲ ಎಂದು ಹಲ್ದಿರಾಮ್ಸ್ ಅಧಿಕೃತವಾಗಿ ಹೇಳುವ ಮೂಲಕವಾಗಿ ಸ್ಪಷ್ಟನೆ ನೀಡಿದೆ.
1937ರಲ್ಲಿ ಆರಂಭವಾದ ಹಲ್ದಿರಾಮ್ಸ್ ರುಚಿಕರವಾದ ತಿನಿಸುಗಳಿಗೆ ದೇಶ ವಿದೇಶಗಳಲ್ಲಿ ಜನಪ್ರಿಯವಾಗಿದೆ. ಟಾಟಾ ಸಂಸ್ಥೆ ಸುಮಾರು 10 ಬಿಲಿಯನ್ ಮೌಲ್ಯದ ಶೇರನ್ನು ಖರೀದಿಸಲು ಹಲ್ದಿರಾಮ್ಸ್ ಜತೆ ಮಾತುಕತೆ ನಡೆಸುತ್ತಿದೆ. ಬೈನ್ ಸಂಸ್ಥಯೂ 10% ಪಾಲನ್ನು ತನ್ನದಾಗಿಸಿಕೊಳ್ಳಲು ಚರ್ಚೆ ನಡೆಸುತ್ತಿದೆ ಎಂದು ವರದಿಯಾಗಿತ್ತು. ಈ ವರದಿಯನ್ನು ಟಾಟಾ ಗ್ರಾಹಕರ ಸಂಸ್ಥೆ ಕೂಡಾ ನಿರಾಕರಿಸಿತ್ತು. ಇದರ ಪರಿಣಾಮವಾಗಿ ಟಾಟಾದ 3% ಶೇರು ಬೆಲೆ ದಿಡೀರನೆ ಕುಸಿದಿದೆ ಎನ್ನಲಾಗುತ್ತಿದೆ.
1937 ರಲ್ಲಿ ಸಣ್ಣ ಅಂಗಡಿಯಲ್ಲಿ ಸ್ಥಾಪಿಸಲಾದ ಕುಟುಂಬ-ಚಾಲಿತ ವ್ಯವಹಾರವಾದ ಹಲ್ದಿರಾಮ್ಸ್ ತನ್ನ ಗರಿಗರಿಯಾದ 'ಭುಜಿಯಾ' ಸ್ನ್ಯಾಕ್ಸ್‌ಗೆ ಹೆಸರುವಾಸಿಯಾಗಿದೆ. ಇದು ಕೈಗೆಟುಕುವ ಬೆಲೆಯಲ್ಲಿದೆ ಮತ್ತು ಭಾರತದಾದ್ಯಂತ ಬಹುತೇಕ ಅಂಗಡಿಗಳಲ್ಲಿ ವ್ಯಾಪಕವಾಗಿ ಲಭ್ಯವಿದೆ. ಇದು ಭಾರತದ 6.2 ಬಿಲಿಯನ್ ಡಾಲರ್ ಖಾರದ ಸ್ನ್ಯಾಕ್ ಮಾರುಕಟ್ಟೆಯಲ್ಲಿ ಸುಮಾರು 13 ಪ್ರತಿಶತ ಪಾಲನ್ನು ಹೊಂದಿದ್ದು, ಇದು ಪೆಪ್ಸಿ, ಚಿಪ್ಸ್‌ಗೆ ಪ್ರತಿಸ್ಪರ್ಧಿಯಾಗಿದೆ.