ಪೆರ್ಲ : ಪೆರ್ಲ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ 52ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸೆ. 19ಹಾಗೂ 20ರಂದು ಪೆರ್ಲ ಶ್ರೀ ಸತ್ಯನಾರಾಯಣ ಮಂದಿರದಲ್ಲಿ ಜರುಗಲಿದೆ. ಈ ಸಂದರ್ಭ ಶ್ರೀ ಗಣೇಶ ವಿಗ್ರಹಕ್ಕೆ ಬೆಳ್ಳಿಯ ಪ್ರಭಾವಳಿಯ ಸಮರ್ಪಣೆ ನಡೆಯುವುದು.
ಬೆಳಗ್ಗೆ 7.30ಕ್ಕೆ ಗಣಪತಿ ಹೋಮದೊಂದಿಗೆ ಗಣೇಶ ವಿಗ್ರಹದ ಪ್ರತಿಷ್ಠೆ ನಡೆಯುವುದು. 8.30ಕ್ಕೆ ಧ್ವಜಾರೋಹಣ, ಭಜನೆ, ವಿವಿಧ ಸ್ಪರ್ಧೆಗಳು ನಡೆಯುವುದು. ಸಂಜೆ 5ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಯಕ್ಷಗಾನ ಕಲಾವಿದ ಹರೀಶ್ ಬಳಂತಿಮೊಗರು ಧಾರ್ಮಿಕ ಭಾಷಣ ಮಾಡುವರು. ಪೆರ್ಲ ಶ್ರೀ ಸತ್ಯನಾರಾಯಣ ವಿದ್ಯಾಸಂಸ್ಥೆಗಳ ಪ್ರಬಂಧಕ ಪಿ.ಎಸ್. ವಿಶ್ವಾಮಿತ್ರ ಗೌರವ ಉಪಸ್ಥಿತರಿರುವರು. ತಹಸೀಲ್ದಾರ್ ಉದಯ ಚೆಟ್ಟಿಯಾರ್ ಪೆರ್ಲ ಅಧ್ಯಕ್ಷತೆ ವಹಿಸುವರು. ಈ ಸಂದರ್ಭ ನಡೆಯುವ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಅಕ್ಕಾಜಿ ಎಂದೇ ಪರಿಚಿತರಾಗಿರುವ ರತ್ನಾವತೀ ಬಿ.ಕೋಟೆ ಅವರನ್ನು ಗೌರವಿಸಲಾಗುವುದು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ನಡೆಯುವುದ. ಸಂಜೆ 7ರಿಂದ ರಮ್ಯಾಮಾಧವನ್ ಟಿ.ಸಿ.ಎಸ್ ಬೆಂಗಳೂರು ಅವರಿಂದ ಶಾಸ್ತ್ರೀಯ ಸಂಗೀತ, ರಾತ್ರಿ 9ರಿಂದ ವಿದುಷಿ ಡಾ. ವಿದ್ಯಾಲಕ್ಷ್ಮೀ, ನಾಟ್ಯ ವಿದ್ಯಾಲಯ ಕುಂಬಳೆ ಮತ್ತು ಬಳಗದವರಿಂದ ನೃತ್ಯ ಸಂಭ್ರಮ ನಡೆಯುವುದು.
20ರಂದು ಬೆಳಗ್ಗೆ ಗಣಹೋಮ, ವಿವಿಧ ಸ್ಪರ್ಧೆಗಳು, ಮಧ್ಯಾಹ್ನ 3ಕ್ಕೆ ಭವ್ಯ ಶೋಭಾಯಾತ್ರೆ ಆರಂಭಗೊಳ್ಳುವುದು. ಶೋಭಾಯಾತ್ರೆಯಲ್ಲಿ ವಿವಿಧ ತಂಡಗಳಿಂದ ಕುಣಿತ ಭಜನೆ ನಡೆಯುವುದು.