HEALTH TIPS

55 ವರ್ಷದಿಂದ ಲಾಟರಿಗೆ 12 ಲಕ್ಷ ಖರ್ಚು: ಇದೇ ಮೊದಲ ಬಾರಿ ಬಂದ ಬಹುಮಾನದ ಮೊತ್ತ ನೋಡಿ ಗ್ರಾಹಕ ಶಾಕ್

              ಟ್ಟಣಂತಿಟ್ಟ: ಓಣಂ ಬಂಪರ್​ ಲಾಟರಿಯ ಫಲಿತಾಂಶವನ್ನು ಮೊನ್ನೆ (ಸೆ.22) ಘೋಷಣೆ ಮಾಡಲಾಯಿತು. ಈ ಬಾರಿ 75 ಲಕ್ಷಕ್ಕೂ ಅಧಿಕ ಮಂದಿ ಲಾಟರಿ ಟಿಕೆಟ್​ ಖರೀದಿ ಮಾಡಿದರು. ತಮಿಳುನಾಡಿ ನಾಲ್ವರು ಯುವಕರು ಮೊದಲ ಬಹುಮಾನವನ್ನು ಪಡೆದಿದ್ದಾರೆ. ಒಂದು ಟಿಕೆಟ್​ಗೆ 500 ರೂ. ಪಾವತಿಸಿ ಏನನ್ನೂ ಪಡೆಯದ ಹಿನ್ನೆಲೆಯಲ್ಲಿ ಅನೇಕರಿಗೆ ನಿರಾಸೆಯೂ ಆಗಿದೆ.

                ಆದರೆ, ಪಟ್ಟಣಂತಿಟ್ಟ ಮೂಲದ ರಾಜನ್​ ಮಾತ್ರ ನಿರಾಶರಾಗಿಲ್ಲ.

           ಮಾಧ್ಯಮ ವರದಿಗಳ ಪ್ರಕಾರ ರಾಜನ್​ ಅವರು ನಿವೃತ್ತ ಸರ್ಕಾರಿ ನೌಕರರು. ಕಳೆದ 55 ವರ್ಷಗಳಿಂದ ಲಾಟರಿ ಖರೀದಿ ಮಾಡುತ್ತಿದ್ದಾರೆ. ಲಾಟರಿ ಟಿಕೆಟ್​ಗಾಗಿಯೇ ಈವರೆಗೆ 12 ಲಕ್ಷ ರೂಪಾಯಿಯನ್ನು ವ್ಯಯಿಸಿದ್ದಾರೆ. ಐದು ದಶಕಗಳಿಗೂ ಹೆಚ್ಚು ಕಾಲ ಲಾಟರಿ ಖರೀದಿ ಮಾಡಿದ ರಾಜನ್​ ಈ ಬಾರಿ ಕೇವಲ 500 ರೂಪಾಯಿ ಗೆದ್ದಿದ್ದಾರೆ.

               ರಾಜನ್​ ಅವರು 9 ಸಾವಿರ ರೂ. ಖರ್ಚು ಮಾಡಿ 18 ಬಾರಿ ಓಣಂ ಬಂಪರ್​ ಲಾಟರಿ ಟಿಕೆಟ್​ ಖರೀದಿ ಮಾಡಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಲಾಟರಿಗೆ ಕೇವಲ 500 ರೂಪಾಯಿ ಬಹುಮಾನವನ್ನು ಪಡೆದಿದ್ದಾರೆ. ಇದುವರೆಗೂ ರಾಜನ್​ ಒಂದೂವರೆ ಲಕ್ಷ ಲಾಟರಿ ಟಿಕೆಟ್​ಗಳನ್ನು ಖರೀದಿ ಮಾಡಿದ್ದಾರೆ. ಒಮ್ಮೆಯೂ ಬಹುಮಾನ ಬಂದಿರಲಿಲ್ಲ. ಮೊದಲ ಬಾರಿಗೆ ಬಹುಮಾನ ಬಂದಿದೆ. ಆದರೆ, ಕೇವಲ 500 ರೂಪಾಯಿ.

                ಕೇವಲ 500 ರೂ. ಬಂದರೂ ಬೇಸರಿಸಿಕೊಳ್ಳದ ರಾಜನ್​, ಲಾಟರಿ ಟಿಕೆಟ್​ಗಳ ಖರೀದಿಯನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ನನ್ನ ಕೈಯಲ್ಲಿ ಸಾಧ್ಯವಾಗುವಷ್ಟ ದಿನ ಲಾಟರಿ ಖರೀದಿ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries