ಇಂದೋರ್: ಖಾಲಿ ಕಾಗದಗಳಲ್ಲಿ ಪುಸ್ತಕ ಬರೆಯುವುದೇ ಕಷ್ಟ ಎನ್ನಿಸುತ್ತದೆ. ಆದರೆ ಇಂದೋರ್ನ ವಕೀಲರೊಬ್ಬರು 6 ವರ್ಷ ಕಾಲಾವಕಾಶ ತೆಗೆದುಕೊಂಡು ಬರೋಬ್ಬರಿ 57 ಕೆಜಿ ತೂಕದ ತಾಮ್ರದ ಪುಸ್ತಕ ಬರೆದು ಹುಬ್ಬೇರಿಸುವಂತೆ ಮಾಡಿದ್ದಾರೆ.
ಇಂದೋರ್: ಖಾಲಿ ಕಾಗದಗಳಲ್ಲಿ ಪುಸ್ತಕ ಬರೆಯುವುದೇ ಕಷ್ಟ ಎನ್ನಿಸುತ್ತದೆ. ಆದರೆ ಇಂದೋರ್ನ ವಕೀಲರೊಬ್ಬರು 6 ವರ್ಷ ಕಾಲಾವಕಾಶ ತೆಗೆದುಕೊಂಡು ಬರೋಬ್ಬರಿ 57 ಕೆಜಿ ತೂಕದ ತಾಮ್ರದ ಪುಸ್ತಕ ಬರೆದು ಹುಬ್ಬೇರಿಸುವಂತೆ ಮಾಡಿದ್ದಾರೆ.
ಇಂದೋರ್ನ ವಕೀಲ ಲೊಕೇಶ್ ಮಂಗಲ್ ಎನ್ನುವವರು ತಾಮ್ರದ ಹಾಳೆಗಳನ್ನು ಉಪಯೋಗಿಸಿ ಪುಸ್ತಕ ಬರೆದಿದ್ದು, 193 ದೇಶಗಳ 6,000 ಚಿಹ್ನೆಗಳು ಮತ್ತು ಸಂವಿಧಾನವನ್ನು ಇಲ್ಲಿ ಉಲ್ಲೇಖಿಸಲಾಗಿದೆ. ಈ ಪುಸ್ತಕಕ್ಕೆ 'ಸಂವಿಧಾನ್ ಸೆ ದೇಶ್' ಎಂಬ ಹೆಸರಿಡಲಾಗಿದೆ. ಸುಮಾರು 200 ನಗರಗಳ 42,000 ಜನರಿಂದ ಕೇವಲ 1 ರೂ. ದೇಣಿಗೆ ಪಡೆದು ಪುಸ್ತಕವನ್ನು ಬರೆಯಲಾಗಿದ್ದು, ವಸುದೈವ ಕುಟುಂಬಕಂ ಮತ್ತು ಸರ್ವೇ ಭವಂತು ಸುಖಿನಃ ಎಂಬ ಭಾರತೀಯ ಉದಾರ ತತ್ವಕ್ಕೆ ನೆಲೆಗಟ್ಟಿನಲ್ಲಿ ರಚಿತವಾಗಿದೆ ಎಂದು ಲೇಖಕ ಲೋಕೇಶ್ ತಿಳಿಸಿದ್ದಾರೆ.
ಈ ಪುಸ್ತಕದ ಮುಖ ಪುಟದ ತೂಕವೇ 10 ಕೆಜಿ ಇದ್ದು, 14 ಇಂಚು ಅಗಲ ಮತ್ತು 48 ಇಂಚು ಉದ್ದವಿದೆ. ಇದನ್ನು ಅಲುಗಾಡಿಸಲು ಕನಿಷ್ಟ ಇಬ್ಬರಾದರೂ ಬೇಕು. ಸುಮಾರು 217 ಗಂಟೆಗಳ ಕಾಲ ಇಬ್ಬರು ಕಲಾವಿದರು ಲೇಸರ್ ತಂತ್ರಜ್ಞಾನದ ಮೂಲಕ ತಾಮ್ರದ ಹಾಳೆಗಳಲ್ಲಿ ಅಕ್ಷರ ಮತ್ತು ಚಿಹ್ನೆಗಳನ್ನು ಕೆತ್ತಿದ್ದಾರೆ.
ಈ ಪುಸ್ತಕವು ನವದೆಹಲಿಯಲ್ಲಿ ನಡೆಯುವ ಜಿ-20 ಸಭೆಯಲ್ಲಿ ಪ್ರದರ್ಶನಗೊಳ್ಳಲಿದೆ. ತಾನು ರಚಿಸಿರುವ ಪುಸ್ತಕಕ್ಕೆ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರೇರಣೆ ಎಂದು ಲೋಕೇಶ್ ಮಂಗಲ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.