ನವದೆಹಲಿ: ಭಾರತೀಯ ಅಂಚೆ ಇಲಾಖೆಯ ಸಾವರಿನ್ ಗೋಲ್ಡ್ ಬಾಂಡ್ ಯೋಜನೆ ಸೆಪ್ಟೆಂಬರ್ 11 ರಿಂದ 15 ರವರೆಗೆ ನಡೆಯಲಿದ್ದು, ಪ್ರತಿ ಗ್ರಾಮಕ್ಕೆ 5923 ರೂ. ದರ ನಿಗದಿಪಡಿಸಲಾಗಿದೆ.
ನವದೆಹಲಿ: ಭಾರತೀಯ ಅಂಚೆ ಇಲಾಖೆಯ ಸಾವರಿನ್ ಗೋಲ್ಡ್ ಬಾಂಡ್ ಯೋಜನೆ ಸೆಪ್ಟೆಂಬರ್ 11 ರಿಂದ 15 ರವರೆಗೆ ನಡೆಯಲಿದ್ದು, ಪ್ರತಿ ಗ್ರಾಮಕ್ಕೆ 5923 ರೂ. ದರ ನಿಗದಿಪಡಿಸಲಾಗಿದೆ.
ವಾರ್ಷಿಕ ಶೇಕಡ 2.5 ರಷ್ಟು ಬಡ್ಡಿದರ ನೀಡಲಾಗುವುದು. ಕನಿಷ್ಠ ಒಂದು ಗ್ರಾಂನಿಂದ 4 ಕೆಜಿವರೆಗೆ ಪ್ರತಿ ವ್ಯಕ್ತಿ ಯೋಜನೆಯಲ್ಲಿ ಹಣ ತೊಡಗಿಸಬಹುದಾಗಿದೆ.
ಸೆಪ್ಟೆಂಬರ್ 11 ರಿಂದ 15 ರವರೆಗೆ ಯೋಜನೆ ಚಾಲ್ತಿಯಲ್ಲಿರಲಿದ್ದು, 5ರಿಂದ 8 ವರ್ಷಗಳ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ಸೂಕ್ತ ದರ ಇರುವಾಗ ಮಾರಲು ಅವಕಾಶ ಇದೆ. ಗೋಲ್ಡ್ ಬಾಂಡ್ ಆದ ಕಾರಣ ಕಳ್ಳರು ಕದ್ದೊಯುವ ಭಯವಿಲ್ಲ. ಅಗತ್ಯವಿದ್ದಾಗ ಚಿನ್ನದಂತೆ ಅಡವಿಟ್ಟು ಸಾಲ ಪಡೆಯಬಹುದಾದ ಅನುಕೂಲತೆ ಇದೆ.
ಚೆಕ್, ಆನ್ಲೈನ್ ಪೇಮೆಂಟ್, ಉಳಿತಾಯ ಖಾತೆಗಳಿಂದ ಹಣದ ವರ್ಗಾವಣೆ ಸೌಲಭ್ಯವಿದ್ದು, ಹೆಚ್ಚಿನ ವಿವರಗಳಿಗಾಗಿ ಸಮೀಪದ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.