HEALTH TIPS

ಅಧಿಕ ರಕ್ತದೊತ್ತಡ: ಭಾರತದಲ್ಲಿ 6.7 ಕೋಟಿ ಜನರಿಗೆ ಚಿಕಿತ್ಸೆ ಬೇಕು- ಡಬ್ಲ್ಯುಎಚ್‌ಒ

              ವದೆಹಲಿ: 'ಭಾರತದಲ್ಲಿ 30-79 ವರ್ಷದವರಲ್ಲಿ ಅಧಿಕ ರಕ್ತದೊತ್ತಡದ ಸಮಸ್ಯೆ ಇದ್ದು, ಇದರ ನಿಯಂತ್ರಣದ ಶೇ 50ರಷ್ಟು ಗುರಿ ಸಾಧಿಸಲು ಸುಮಾರು 6.7 ಕೋಟಿ ಜನರಿಗೆ ಚಿಕಿತ್ಸೆ ಕಲ್ಪಿಸಬೇಕು ಎಂದು ವಿಶ್ವ ಆರೋಗ್ಯ ಸಂಘಟನೆಯ (ಡಬ್ಲ್ಯುಎಚ್‌ಒ) ವರದಿ ಉಲ್ಲೇಖಿಸಿದೆ.

              ಅಧಿಕ ರಕ್ತದೊತ್ತಡ ನಿಯಂತ್ರಿಸಲು ಚಿಕಿತ್ಸೆ ನೀಡುವಲ್ಲಿ ಕೇಂದ್ರ ಸರ್ಕಾರ ಮುತುವರ್ಜಿ ವಹಿಸಿದರೆ, ಇದರಿಂದಾಗಿ 2040ರ ವೇಳೆಗೆ ಸುಮಾರು 46 ಲಕ್ಷ ಜನರ ಸಂಭವನೀಯ ಸಾವು ತಪ್ಪಿಸಬಹುದು ಎಂದು ಡಬ್ಲ್ಯುಎಚ್‌ಒ ತನ್ನ ಮೊದಲ ಜಾಗತಿಕ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.

            ಸಕಾಲದಲ್ಲಿ ಸಮಸ್ಯೆ ಗುರುತಿಸದಿರುವುದು, ನಿಯಂತ್ರಿಸದಿರುವುದು ನಕಾರಾತ್ಮಕ ಪರಿಣಾಮವಾಗಲಿದೆ. ಹೃದಯಾಘಾತ, ಮೆದುಳಿಗೆ ಪಾರ್ಶ್ವವಾಯು, ಹೃದಯ ಮತ್ತು ಮೂತ್ರಪಿಂಡ ವೈಫಲ್ಯ ಆಗಬಹುದು. ಇದರಿಂದ ಸಾವು ಅಥವಾ ಅಂಗವಿಕಲತೆ ಎದುರಾಗಲಿದೆ.

                'ಡಬ್ಲ್ಯುಎಚ್‌ಒ ಅಧ್ಯಯನದ ಅನುಸಾರ, ಜನರಲ್ಲಿ ಅರಿವಿನ ಕೊರತೆ, ಸಕಾಲದಲ್ಲಿ ಪತ್ತೆಯಾಗದಿರುವುದು, ಚಿಕಿತ್ಸೆ ಕೊರತೆ ಸಮಸ್ಯೆಗೆ ಕಾರಣ ವಾಗಿದೆ' ಎಂದು ಹೃದ್ರೋಗ ತಜ್ಞ, ಭಾರತೀಯ ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನದ ಮಾಜಿ ಅಧ್ಯಕ್ಷ ಕೆ.ಶ್ರೀನಾಥ ರೆಡ್ಡಿ ಹೇಳಿದರು.

               ಜಾಗತಿಕವಾಗಿ ಪ್ರತಿ ಐವರಲ್ಲಿ ಒಬ್ಬರಿಗೆ ಈ ಸಮಸ್ಯೆ ಇದೆ. ಸಮರ್ಪಕ ಚಿಕಿತ್ಸೆ ದೊರೆಯುತ್ತಿಲ್ಲ. ವಿವಿಧ ದೇಶಗಳು ಜಾಗೃತಗೊಂಡು ಚಿಕಿತ್ಸೆಗೆ ಒತ್ತು ನೀಡಿದರೆ 2023 ರಿಂದ 2050ರ ಅವಧಿಯಲ್ಲಿ 7.6 ಕೋಟಿ ಜನರ ಸಂಭವನೀಯ ಸಾವು ತಡೆಯಬಹುದು ಎಂದು ವರದಿ ಹೇಳಿದೆ.

                 ಭಾರತದಲ್ಲಿ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ನಿಯಂತ್ರಿಸಲು ಹಾಗೂ ಸಮಸ್ಯೆಯಿಂದ ಬಳಲುತ್ತಿರುವವರನ್ನು ಗುರುತಿಸಲು ಚುರುಕು ನೀಡಬೇಕು. ನಿಯಂತ್ರಣ ಕಾರ್ಯಕ್ರಮವನ್ನು ಗ್ರಾಮಮಟ್ಟದಲ್ಲಿ ಜಾರಿಗೊಳಿಸಲು ಆದ್ಯತೆ ನೀಡಬೇಕು ಎಂದು ಡಬ್ಲ್ಯುಎಚ್‌ಒ ಸಲಹೆ ಮಾಡಿದೆ.

ಅಧಿಕ ರಕ್ತದೊತ್ತಡಕ್ಕೆ ಉನ್ನತ ಗುಣಮಟ್ಟದ ಚಿಕಿತ್ಸೆ ನೀಡುವ ಕೇಂದ್ರ ಸರ್ಕಾರದ ಕಾರ್ಯಕ್ರಮವನ್ನು ಸದ್ಯ 27 ರಾಜ್ಯಗಳ 155 ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ. ಔಷಧಗಳ ಅಲಭ್ಯತೆಯಿಂದಾಗಿ ಆರಂಭದಲ್ಲಿ ಕಾರ್ಯಕ್ರಮ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. 2018ರಲ್ಲಿ ಪಂಜಾಬ್, ಮಧ್ಯಪ್ರದೇಶ, ಕೇರಳ, ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿ ಜಾರಿಗೊಂಡಿತ್ತು. ಔಷಧಗಳ ಲಭ್ಯತೆಯೇ ಆರಂಭದಲ್ಲಿ ದೊಡ್ಡ ಸವಾಲಾಗಿತ್ತು.

                 ಆದರೆ, ಕೇಂದ್ರದ ಜೊತೆಗೆ ಸಂಪರ್ಕದಲ್ಲಿದ್ದ ಡಬ್ಲ್ಯುಎಚ್‌ಒ ಪ್ರತಿನಿಧಿಗಳು ಸಮಸ್ಯೆ ಬಗೆಹರಿಸಲು ಒತ್ತು ನೀಡಿ, ಔಷಧ ಪೂರೈಕೆ ವ್ಯವಸ್ಥೆ ಬಲಪಡಿಸಿದರು. ಪರಿಣಾಮ, 2020ರ ವೇಳೆಗೆ ಶೇ 70ರಷ್ಟು ಆರೋಗ್ಯ ಕೇಂದ್ರಗಳಲ ತಿಂಗಳಿಗಾಗುವಷ್ಟು ಔಷಧದ ದಾಸ್ತಾನು ಆಯಿತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries