HEALTH TIPS

ಒಡಿಶಾದಲ್ಲಿ 'ಸ್ಕ್ರಬ್ ಟೈಫಸ್' ಜ್ವರ; 6 ಮಂದಿ ಸಾವು

              ಭುವನೇಶ್ವರ: ಒಡಿಶಾದಲ್ಲಿ 'ಸ್ಕ್ರಬ್ ಟೈಫಸ್' ಎಂಬ ಸೋಂಕು ಜ್ವರ ಕಾಣಿಸಿಕೊಂಡಿದ್ದು, ಈವರೆಗೆ ಆರು ಮಂದಿ ಮೃತಪಟ್ಟಿದ್ದಾರೆ.

             ಬರ್ಗಢ್ ಜಿಲ್ಲೆಯಲ್ಲಿ ಐದು ಮಂದಿ ಮತ್ತು ಸುಂದರ್‌ಗಢ್ ಜಿಲ್ಲೆಯಲ್ಲಿ ಒಬ್ಬರು ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

            ಸುಂದರ್‌ಗಢ್ ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ 132 ಸ್ಕ್ರಬ್ ಟೈಫಸ್ ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ ಬಹುತೇಕ ಮಂದಿ ಗುಣಮುಖರಾಗಿದ್ದಾರೆ ಎಂದು ಮುಖ್ಯ ಜಿಲ್ಲಾ ವೈದ್ಯಕೀಯ ಹಾಗೂ ಸಾರ್ವಜನಿಕ ಆರೋಗ್ಯ ಅಧಿಕಾರಿ ಕನ್ಹು ಚರಣ್ ನಾಯಕ್ ತಿಳಿಸಿದ್ದಾರೆ.

                                   ಸ್ಕ್ರಬ್ ಟೈಫಸ್ ರೋಗ ಹರಡುವ ವಿಧಾನ...

            ವ್ಯಕ್ತಿಗಳಿಗೆ ಚಿಗಟ ಕಚ್ಚಿದರೆ ಸ್ಕ್ರಬ್ ಟೈಫಸ್ ಜ್ವರ ಹರಡುತ್ತದೆ. ಕೃಷಿ ಭೂಮಿ ಅಥವಾ ಕಾಡು ಪ್ರದೇಶಕ್ಕೆ ಭೇಟಿ ನೀಡುವ ಜನರಿಗೆ ಚಿಗಟ ಕಚ್ಚುವ ಸಾಧ್ಯತೆ ಇದ್ದು, ಸೋಂಕಿಗೆ ಒಳಗಾಗುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

                                          ಪತ್ತೆ ಹಚ್ಚುವುದು ಹೇಗೆ?

           ಹಲವು ದಿನಗಳವರೆಗೆ ಜ್ವರ ಕಾಣಿಸಿಕೊಂಡಾಗ ರೋಗಿ ಸ್ಕ್ರಬ್ ಟೈಫಸ್‌ನಿಂದ ಬಳುತ್ತಿದ್ದಾರೆಯೇ ಎಂದು ಕಂಡುಹಿಡಿಯಲು ELISA ಪರೀಕ್ಷೆ ನಡೆಸಬೇಕಾಗುತ್ತದೆ. ಎಲ್ಲ ಜಿಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳಲ್ಲಿ ಪರೀಕ್ಷೆ ಲಭ್ಯವಿದ್ದು, ಆರಂಭದಲ್ಲೇ ರೋಗ ಪತ್ತೆಹಚ್ಚಲು ಸಾಧ್ಯವಾದರೆ ಚಿಕಿತ್ಸೆ ಪರಿಣಾಮಕಾರಿ ಎನಿಸಲಿದೆ ಎಂದು ತಿಳಿಸಿದ್ದಾರೆ.

                ಈ ಮಧ್ಯೆ ಸ್ಕ್ರಬ್ ಟೈಫಸ್ ಹಾಗೂ ಲೆಪ್ಟೊಸ್ಪಿರೋಸಿಸ್ ಹಿನ್ನೆಲೆಯಲ್ಲಿ ಕಣ್ಗಾವಲು ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಅಧಿಕಾರಿಗಳಿಗೆ ರಾಜ್ಯ ಆರೋಗ್ಯ ಇಲಾಖೆ ನಿರ್ದೇಶಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries