ಕೊಟ್ಟಾಯಂ: ಭಾರೀ ಮತದಾನದೊಂದಿಗೆ ಪುದುಪ್ಪಳ್ಳಿ ಕ್ಷೇತ್ರದಲ್ಲಿ ನಿನ್ನೆ ನಡೆದ ಉಪ ಚುನಾವಣೆ ಶಾಂತರೀತಿಯಲ್ಲಿ ಕೊನೆಗೊಂಡಿತು. ಸಂಜೆ 6 ಗಂಟೆಯವರೆಗೆ ಶೇ.73.05 ರಷ್ಟು ಮತದಾನವಾಗಿದೆ.
ಮತದಾನದ ಸಮಯ ಮುಗಿದಿದ್ದರೂ ವಿವಿಧ ಬೂತ್‍ಗಳಲ್ಲಿ ಮತದಾನ ಮಾಡಲು ಜನರ ಉದ್ದನೆಯ ಸರತಿ ಸಾಲು ಕಂಡು ಬಂದಿತ್ತು.
2021 ರಲ್ಲಿ 74.84 ರಷ್ಟು ಮತದಾನವಾಗಿತ್ತು. ಕ್ಷೇತ್ರದಲ್ಲಿ 90,281 ಮಹಿಳೆಯರು, 86,132 ಪುರುಷರು, ನಾಲ್ವರು ತೃತೀಯಲಿಂಗಿ ಸೇರಿದಂತೆ 1,76,417 ಮತದಾರರಿದ್ದಾರೆ. 182 ಬೂತ್‍ಗಳಲ್ಲಿ 957 ಹೊಸ ಮತದಾರರಿದ್ದಾರೆ. ಏಳು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸೆಪ್ಟೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ.