ವಯನಾಡು: ಕಣಿವೆಗೆ ಬಿದ್ದ ಬೆಲೆ ಬಾಳುವ ಐ-ಪೋನನ್ನು ಯಶಸ್ವಿ ಕಾರ್ಯಾಚರಣೆಯ ಮೂಲಕ ಪ್ರವಾಸಿಗಳಿಗೆ ಮರಳಿಸಿ ಅಗ್ನಿಶಾಮಕದಳ ಸ್ತುತ್ಯರ್ಹವಾಗಿ ಶ್ಲಾಘಿಸಲ್ಪಟ್ಟ ಘಟನೆ ವಯನಾಡಲ್ಲಿ ನಡೆದಿದೆ.
ವಯನಾಡ್ ಪಾಸ್ ನಲ್ಲಿ ಈ ಘಟನೆ ನಡೆದಿದೆ. ಕೋಝಿಕ್ಕೋಡ್ ನಿವಾಸಿ ಜಾಸ್ಸಿಮ್ ಎಂಬಾತ 75,000 ರೂಪಾಯಿ ಮೌಲ್ಯದ ಐಫೆÇೀನ್ 12 ಪ್ರೊ ಕಣಿವೆಗೆ ಎಸೆಯಲ್ಪಟ್ಟಿತ್ತು. ವ್ಯೂ ಪಾಯಿಂಟ್‍ನಿಂದ ನೋಡುತ್ತಿರುವಾಗ ಈ ಘಟನೆ ನಡೆದಿದೆ.
ಜಾಸ್ಸಿಮ್ ಪೋನ್ ಜೀಪಿನಲ್ಲಿ ಇಟ್ಟು ಹೊರಗೆ ತೆರಳಿದ್ದರು. ಅಷ್ಟರಲ್ಲಿ ಕೋತಿಗಳ ತಂಡ ವಾಹನದಿಂದ ಪೋನ್ ಕಸಿದು ವ್ಯೂಪಾಯಿಂಟ್ ನಿಂದ ಕೆಳಗೆ ಎಸೆದಿದೆ. ಬೆಳಗ್ಗೆ ಒಂಬತ್ತು ಗಂಟೆ ಸುಮಾರಿಗೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ನಂತರ ಕಲ್ಪಟ್ಟಾ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿತು. ಅಗ್ನಿಶಾಮಕ ದಳದ ಸಿಬ್ಬಂದಿ ಜಿತಿನ್ ಕುಮಾರ್ ಹಗ್ಗ ಕಟ್ಟಿ ಕೆಳಗೆ ಇಳಿದು ಪೋನ್ ತೆಗೆದುಕೊಂಡು ಬಂದು ಜಾಸ್ಸಿಮ್ ಗೆ ಕೊಟ್ಟಿದ್ದಾರೆ. ಸುಮಾರು ಅರ್ಧ ಗಂಟೆಯ ಪ್ರಯತ್ನದ ನಂತರ ಅವರು ತಲುಪಬೇಕಾದ ಸ್ಥಳವನ್ನು ತಲುಪಿದರು ಮತ್ತು ಪೋನ್ ಯಶಸ್ವಿಯಾಗಿ ತೆಗೆದುಕೊಳ್ಳಲು ಸಾಧ್ಯವಾಯಿತು. ಪೋನ್‍ಗೆ ಯಾವುದೇ ಹಾನಿಯಾಗಿಲ್ಲ.