ಮಳೆಗಾಲದಲ್ಲಿ ಮಳೆ ಕೈ ಕೊಟ್ಟಿರುವುದರಿಂದ ಸೆಕೆ ಬೇಸಿಗೆಗಿಂತ ಮೊದಲೇ ಶುರುವಾಗಿದೆ. ಸುಡು ಬಿಸಿಲು ಅಪರೂಪಕ್ಕೊಮ್ಮೆ ಸುರಿಯುವ ಮಳೆ ಇದರಿಂದ ವಾತಾವರಣದಲ್ಲಿ ತುಂಬಾನೇ ಬದಲಾವಣೆಯಾದಂತೆ ಅನಿಸಲಾರಂಭಿಸಿದೆ ಅಲ್ವಾ? ಸೆಕೆಗೆ ದೇಹದ ಉಷ್ಣಾಂಶ ಹೆಚ್ಚಾದಾಗ ಮಜ್ಜಿಗೆ ಕುಡಿದರೆ ಒಳ್ಳೆಯದು. ಮಜ್ಜಿಗೆಯಷ್ಟೇ ಗುಣಗಳಿರುವ ಇನ್ನೂ ಕೆಲವು ಪಾನೀಯಗಳಿವೆ.
ನೀವು ಮಜ್ಜಿಗೆ ಬದಲಿಗೆ ಅವುಗಳನ್ನು ಕುಡಿಯುವುದರಿಂದ ದೇಹದ ಉಷ್ಣಾಂಶ ಕಾಪಾಡಬಹುದು, ಅಲ್ಲದೆ ಈ ಪಾನೀಯಗಳಲ್ಲಿಯೂ ಅನೇಕ ಆರೋಗ್ಯಕರ ಗುಣಗಳಿವೆ, ದೇಹವನ್ನು ತಂಪಾಗಿ ಇಡುತ್ತದೆ. ಅಲ್ಲದೆ ಕೆಲವೊಮ್ಮೆ ಆಯುರ್ವೇದ ಔಷಧಿ ತೆಗೆದುಕೊಳ್ಳುವಾಗ ಹಾಲಿನ ಉತ್ಪನ್ನಗಳನ್ನು ಸೇವಿಸಬೇಡಿ ಎದು ಹೇಳುತ್ತಾರೆ, ಆವಾಗ ಹಾಲಿನ ಬದಲಿಗೆ ಈ ಪಾನೀಯಗಳನ್ನು ಬಳಸಬಹುದು,ಪಿತ್ತವನ್ನು ನಿಯಂತ್ರಣದಲ್ಲಿಡುವಲ್ಲಿ ಈ ಪಾನೀಯಗಳು ಪರಿಣಾಮಕಾರಿ:ಸೌತೆಕಾಯಿ ಜ್ಯೂಸ್: ಸೌತೆಕಾಯಿ ಜ್ಯೂಸ್ ಕೂಡ ಮಜ್ಜಿಗಷ್ಟೇ ದೇಹಕ್ಕೆ ತಂಪು, ಪಿತ್ತ ಕಡಿಮೆ ಮಾಡಲು ಈ ಸೌತೆಕಾಯಿ ಜ್ಯೂಸ್ ತುಂಬಾನೇ ಒಳ್ಳೆಯದು. ನೀವು ಸೌತೆಕಾಯಿ ಜ್ಯೂಸ್‌ಗೆ ಸ್ವಲ್ಪ ಕಲ್ಲುಪ್ಪು, ಪುದೀನಾ ಹಾಕಿ ಕುಡಿಯಿರಿ.
ಮಾಡುವ ವಿಧಾನ
ಸೌತೆಕಾಯಿ ಸಿಪ್ಪೆ ಸುಲಿದು ಅದಕ್ಕೆ ಸ್ವಲ್ಪ ಕಲ್ಲುಪ್ಪು ಸೇರಿಸಿ, ಒಂದು ಎಲೆ ಪುದೀನಾ ಸೇರಿಸಿ ಗ್ರೈಂಡ್ ಮಾಡಿ ಜ್ಯೂಸ್ ಮಾಡಿ ಕುಡಿಯಿರಿ.
ಕೊತ್ತಂಬರಿ ಬೀಜದ ನೀರು: ಕೊತ್ತಂಬರಿ ಬೀಜವನ್ನು ನೀರಿನಲ್ಲಿ ಹಾಕಿ ಕುದಿಸಿ ಆ ನೀರನ್ನು ಕುಡಿದರೆ ದೇಹಕ್ಕೆ ತಂಪಾಗುವುದು, ಆರೋಗ್ಯವೂ ಉತ್ತಮವಾಗುವುದು. ಮಾಡುವ ವಿಧಾನ: ಕೊತ್ತಂಬರಿ ಬೀಜ, ಜೊತೆಗೆ ಸ್ವಲ್ಪ ಬೆಲ್ಲ ಹಾಕಿ ಕುದಿಸಿ ಕುಡಿಯಲು ತುಂಬಾನೇ ರುಚಿಯಾಗಿರುತ್ತದೆ.
ಲೋಳೆರಸದ ಜ್ಯೂಸ್: ಪಿತ್ತ ಕಡಿಮೆ ಮಾಡುವಲ್ಲಿ ಲೋಳೆರಸದ ಜ್ಯೂಸ್ ಕೂಡ ತುಂಬಾನೇ ಒಳ್ಳೆಯದು. ಈ ಜ್ಯೂಸ್ ಪಿತ್ತವನ್ನು ಸಮತೋಲನದಲ್ಲಿಡಲು ತುಂಬಾನೇ ಸಹಕಾರಿ. ಮಾಡುವ ವಿಧಾನ 2 ಕಪ್ ಕೋಲ್ಡ್ ವಾಟರ್ ಸ್ವಲ್ಪ ತಾಜಾ ಲೋಳೆಸರ ನಿಂಬೆಹಣ್ಣು ನೀರಿಗೆ ಲೋಳೆಸರ ಹಾಕಿ ಬ್ಲೆಂಡ್ ಮಾಡಿ ಅದಕ್ಕೆ ನಿಂಬೆರಸ ಹಾಕಿ ಕುಡಿದರೆ ಒಳ್ಳೆಯದು.
ಸೋಂಪು ನೀರು: ಸೋಂಪು ನೀರು ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು. ಹೊಟ್ಟೆ ಉಬ್ಬುವಿಕೆ ತಡೆಗಟ್ಟಲು ಈ ಸೋಂಪು ನೀರು ತುಂಬಾನೇ ಸಹಕಾರಿ. ನೀವು ನೀರಿಗೆ ಸೋಂಪು ಹಾಕಿ ಆ ನೀರನ್ನು ಕುಡಿದರೆ ತುಂಬಾ ಒಳ್ಳೆಯದು.
ದಾಳಿಂಬೆ ಜ್ಯೂಸ್: ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ಪಿತ್ತವನ್ನು ಸಮತೋಲನದಲ್ಲಿಡಬಹುದು. ಕಫ ದೋಷ ಇರುವವರಿಗೆ ಈ ದಾಳಿಂಬೆ ಜ್ಯೂಸ್ ತುಂಬಾ ಒಳ್ಳೆಯದು.
ಪುದೀನಾ ಟೀ: ಜೀರ್ಣಕ್ರಿಯೆಗೆ ಪುದೀನಾ ಟೀ ತುಂಬಾ ಒಳ್ಳೆಯದು. ಪುದೀನಾ ಟೀ ಕೂಡ ಕಫ ಸಮಸ್ಯೆ ತಡೆಗಟ್ಟಲು ತುಂಬಾನೇ ಸಹಕಾರಿ.
ಎಳನೀರು: ಎಳನೀರು ಕುಡಿಯುವುದರಿಂದ ಕೂಡ ಪಿತ್ತ ದೋಷವನ್ನು ಸಮತೋಲನದಲ್ಲಿ ಇಡಬಹುದು.