ಪೆರ್ಲ: ನಲ್ವತ್ತು ವರ್ಷದ ಹಿಂದೆ ಪದವಿ ತರಗತಿಗೆ ಪಾಠ ಮಾಡಿದ ಗುರುಗಳನ್ನು ಕುಟುಂಬ ಸಮೇತರಾಗಿ ಆಹ್ವಾನಿಸಿ ಗುರು ವಂದನೆ ಸಲ್ಲಿಸಿದ ಹಳೆ ವಿದ್ಯಾರ್ಥಿ ಸಮೂಹವೊಂದು ಕೃತಾರ್ಥರಾದ ಕ್ಷಣ ಸೈಪಂಗಲ್ಲಿ ನಡೆಯಿತು. ಇಲ್ಲಿನ ಹೊಸ ಮನೆ ನಳಿನಿ ಜಗದೀಶ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುರುವಂದನಾ ಕಾರ್ಯಕ್ರಮ -- ಸೈಪಂಗಲ್ಲು ಹೊಸಮನೆಯಲ್ಲಿ ಪುತ್ತೂರಿನ ಫಿಲೋಮಿನ ಕಾಲೇಜ್ ನ ಹಳೇವಿದ್ಯಾರ್ಥಿಗಳ ಫಿಲೋಸ್ 83 ಗ್ರೂಪ್ ನವರು ಈ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದರು.
ಸಂತ ಫಿಲೋಮಿನ ಕಾಲೇಜ್ ನ ನಿವೃತ್ತ ಪ್ರಾಧ್ಯಾಪಕರಾದ ಈಶ್ವರ ಭಟ್ ಸಂಪೆತ್ತಿಲ್ಲ, ರಾಮಕೃಷ್ಣ ರಾವ್ ಪೇರಾಜೆ, ವಸಂತಿ ಸೀತಾರಾಮ್ ಗೌಡ ಬಂಗಾರ ಕೋಡಿ, ಹರಿ ನಾರಾಯಣ ಮಾಡಾವು ಅವರನ್ನು ಗುರುವಂದನೆಯ ಮೂಲಕ ಅಭಿನಂದಿಸಲಾಯಿತು.
ಹಿರಿಯ ಚಿಂತಕ ಹಾಗೂ ನಿವೃತ್ತ ಅಧ್ಯಾಪಕ ಸುಬ್ರಮಣ್ಯ ಭಟ್ ಕಜಂಪಾಡಿ ಇವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶ್ಯಾಮಲಾ ಪತ್ತಡ್ಕ ಪ್ರಾರ್ಥನೆಗೈದರು. ಫಿಲೋಸ್ 83 ಗ್ರೂಪ್ ನ ಸದಸ್ಯರು ತಮ್ಮ ನೆಚ್ಚಿನ ಹಿರಿಯ ಪ್ರಾಧ್ಯಾಪಕರ ಬಗ್ಗೆ ಹಾಗೂ ಹಳೆಯ ನೆನಪುಗಳ ಬಗ್ಗೆ ಮೆಲುಕು ಹಾಕಿ ಮಾತನಾಡಿದರು. ಪ್ರಾಧ್ಯಾಪಕರೂ ನೆರೆದ ಹಳೆ ವಿದ್ಯಾರ್ಥಿಗಳಿಗೆ ಅನುಗ್ರಹದ ನುಡಿಯಾಡಿದರು. ನಿವೃತ್ತ ಶಿಕ್ಷಕಿ, ಕವಯತ್ರಿ ನಳಿನಿ ಟೀಚರ್ ಸೈಪಂಗಲ್ಲು ಸ್ವಾಗತಿಸಿ, ಶ್ಯಾಮ್ ಕುಮಾರ್ ವಂದಿಸಿದರು. ಕೇಂದ್ರೀಯ ವಿದ್ಯಾಲಯದ ನಿವೃತ್ತ ಮುಖ್ಯೋಪಾಧ್ಯಾಯ ಎಸ್.ಎನ್.ಭಟ್ ಸೈಪಂಗಲ್ಲು ನಿರೂಪಿಸಿದರು.