HEALTH TIPS

ಭಾರತದಲ್ಲಿ ಪಿ-8ಐ ವಿಮಾನಗಳನ್ನು ತಯಾರಿಸಲು ಬೋಯಿಂಗ್‌ ಸಜ್ಜು

             ವದೆಹಲಿ: ಭಾರತೀಯ ನೌಕಾಪಡೆಗೆ ಮತ್ತೆ ಆರು ಹೆಚ್ಚುವರಿ ಪಿ-8ಐ ಕಡಲ ಗಸ್ತು ಯುದ್ಧ ವಿಮಾನಗಳನ್ನು ಪೂರೈಸಲು ಆದೇಶ ಎದುರು ನೋಡುತ್ತಿರುವ ಅಮೆರಿಕದ ಏರೋಸ್ಪೇಸ್‌ ಕಂಪನಿ ಬೊಯಿಂಗ್‌, ಭಾರತದಲ್ಲಿ ಪಿ-8ಐ ದೂರ ವ್ಯಾಪ್ತಿಯ ಕಡಲ ಕಣ್ಗಾವಲು ಮತ್ತು ಜಲಾಂತರ್ಗಾಮಿ ನಿಗ್ರಹ ಯುದ್ಧ ವಿಮಾನಗಳನ್ನು ತಯಾರಿಸುವ ಯೋಜನೆಯನ್ನು ತೆರೆದಿಟ್ಟಿದೆ.

                ಸದ್ಯ, ಭಾರತೀಯ ನೌಕಾಪಡೆಯು 12 ಪಿ-8ಐ ವಿಮಾನಗಳನ್ನು ಹೊಂದಿದೆ.

              ಭಾರತೀಯ ನೌಕಾಪಡೆಯಲ್ಲಿ ಸೇವೆಯಲ್ಲಿರುವ ಪ್ರಸ್ತುತ ಪಿ-8ಐ ವಿಮಾನಗಳ ತುಕಡಿಯನ್ನು ಒದಗಿಸುವಲ್ಲಿ ಕಂಪನಿಯು ಈಗಾಗಲೇ ₹14,135 ಕೋಟಿಯ ಆರ್ಥಿಕತೆಯನ್ನು ಸೃಷ್ಟಿಸಿದೆ ಎಂದು ಕಂಪನಿಯು ಹೇಳಿದೆ.

               ಪಿ-8ಐ ವಿಮಾನಗಳ ತುಕಡಿಯನ್ನು 18 ವಿಮಾನಗಳಿಗೆ ಹೆಚ್ಚಿಸುವುದರಿಂದ ಹೂಡಿಕೆಯು ಸುಮಾರು ₹12,430 ಕೋಟಿ ಹೆಚ್ಚಲಿದೆ. 2032ರ ವೇಳೆಗೆ ಭಾರತದ ಏರೋಸ್ಪೇಸ್ ಮತ್ತು ರಕ್ಷಣಾ ವಲಯದಲ್ಲಿ ಮತ್ತಷ್ಟು ಸ್ವದೇಶೀಕರಣದ ಅವಕಾಶಗಳನ್ನು ಇದು ಸೃಷ್ಟಿಸಲಿದೆ ಎಂದು ಬೋಯಿಂಗ್ ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries