ನವದೆಹಲಿ: 2016ರ ಮಿಸ್ ಇಂಡಿಯಾ ಫೈನಲಿಸ್ಟ್ ಐಶ್ವರ್ಯಾ ಶೆರನ್ ಯುಪಿಎಸ್ಸಿ ಪರೀಕ್ಷೆಯಲ್ಲಿ 93ನೇ ಶ್ರೇಣಿ ಗಳಿಸಿದ್ದಾರೆ. ಈ ಮೂಲಕ ಬ್ಯೂಟಿಯ ಜತೆಗೆ ಬ್ರೈನ್ ಕೂಡಾ ಚುರುಕಾಗಿದೆ ಎಂದು ನೆಟ್ಟಿಗರು ಪ್ರಶಂಸೆಯ ಮಳೆಯನ್ನೇ ಸುರಿಸುತ್ತಿದ್ದಾರೆ. ಐಶ್ವರ್ಯಾ ಶಿಯೋರಾನ್ ತನ್ನ ಮಾಡೆಲಿಂಗ್ ಕ್ಷೇತ್ರಕ್ಕೆ ಗುಡ್‌ಬೈ ಹೇಳಿ ಐಎಫ್‌ಎಸ್ ಅಧಿಕಾರಿಯಾಗಲು ಅವರು ವಹಿಸಿದ ಶ್ರಮ, ಶ್ರದ್ಧೆ ಎಲ್ಲರ ಗಮನ ಸೆಳೆದಿದೆ.