ಕಾಸರಗೋಡು: ರಂಗ ಚಿನ್ನಾರಿ ಕಾಸರಗೋಡು ಹಾಗೂ ಮಹಿಳಾ ಘಟಕ ನಾರಿ ಚಿನ್ನಾರಿಯ ಸಹಯೋಗದೊಂದಿಗೆ ಆಯೋಜಿಸುವ ವಿನೂತನ ಕಾರ್ಯಕ್ರಮ 'ಸ್ವರ ಚಿನ್ನಾರಿ' ಇದರ ಉದ್ಘಾಟನಾ ಸಮಾರಂಭ ಹಾಗೂ 'ಈ ನೆಲ ಈ ಸ್ವರ' ಭಾವಗೀತೆ ಗಾಯನ ಕಾರ್ಯಕ್ರಮ ಸೆ. 9ರಂದು ಸಂಜೆ 4.30ಕ್ಕೆ ಕಾಸರಗೋಡಿನ ಪಿಲಿಕುಂಜೆಯ ಮುನ್ಸಿಪಲ್ ಕಾನ್ಸರೆನ್ಸ್ ಹಾಲ್ ನಲ್ಲಿ ನಡೆಯಲಿದೆ.
ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಗೌರವಾಧ್ಯಕ್ಷ ಹಾಗೂ ಖ್ಯಾತ ಗಾಯಕ ವೈ.ಕೆ. ಮುದ್ದುಕೃಷ್ಣ ಕಾರ್ಯಕ್ರಮ ಉದ್ಘಾಟಿಸುವರು. ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕøತರಾದ ಡಾ. ನಾ.ದಾಮೋದರ ಶೆಟ್ಟಿ ಅಧ್ಯಕ್ಷತೆ ವಹಿಸುವರು.ಖ್ಯಾತ ಚಲನಚಿತ್ರ ನಟರು ಮತ್ತು ಅಂತರಾಷ್ಟ್ರೀಯ ಖ್ಯಾತಿಯ ಮಿಮಿಕ್ರಿ ಕಲಾವಿದರಾದ ಮಿಮಿಕ್ರಿ ದಯಾನಂದ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ವಿ.ಭಟ್ ಹಾಗೂ ಧಾರ್ಮಿಕ ಮುಂದಾಳು ಮತ್ತು ಖ್ಯಾತ ನೇತ್ರ ತಜ್ಞ ಡಾ. ಅನಂತ ಕಾಮತ್, ಖ್ಯಾತ ಕವಿಗಳು ಹಾಗೂ ಸ್ವರಚಿನ್ನಾರಿಯ ಗೌರವಾಧ್ಯಕ್ಷ ಶ್ರೀಕೃಷ್ಣಯ್ಯ ಅನಂತಪುರ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ವಿಶೇಷ ಆಕರ್ಷಣೆಯಾಗಿ ಮಿಮಿಕ್ರಿ ದಯಾನಂದ್ ಇವರಿಂದ ಮಿಮಿಕ್ರಿ ಕಾರ್ಯಕ್ರಮ ನಡೆಯಲಿದೆ.
ಈ ಸಂದರ್ಭ ನಾಡಿನ ಖ್ಯಾತ ಸಾಹಿತಿಗಳಾದ ರಾಷ್ಟ್ರಕವಿ ಗೋವಿ0ದ ಪೈ, ನಾಡೋಜ ಡಾ. ಕಯ್ಯಾರ ಕಿನ್ನಣ್ಣ ರೈ, ಕೆ.ವಿ ತಿರುಮಲೇಶ, ಡಾ. ವೆಂಕಟರಾಜ ಪು0ಚಿತ್ತಾಯ, ಬಿ ಕೃಷ್ಣ ಪೈ, ಡಾ.ರಮಾನಂದ ಬನಾರಿ, ಡಾ.ನಾ.ದಾಮೋದರ ಶೆಟ್ಟಿ, ಶ್ರೀಕೃಷ್ಣಯ್ಯ ಅನಂತಪುರ, ರಾಧಾಕೃಷ್ಣ ಉಳಿಯತ್ತಡ್ಕ, ಡಾ. ಯು.ಮಹೇಶ್ವರಿ, ವಿಜಯಲಕ್ಷ್ಮಿ ಶ್ಯಾನುಭಾಗ್, ಸ್ನೇಹಲತಾ ದಿವಾಕರ್, ಅನ್ನಪೂರ್ಣ ಬೆಜಪ್ಪೆ, ಸರ್ವಮಂಗಳ ಜಯ ಪುಣಿಂಚಿತ್ತಾಯ, ಸೌಮ್ಯಾ ಪ್ರವೀಣ್ ಇವರು ರಚಿಸಿದ ಹಾಡುಗಳನ್ನು ಗಾಯಕರಾದ ಕಿಶೋರ್ ಪೆರ್ಲ, ರತ್ನಾಕರ್ ಓಡಂಗಲ್ಲು, ಗಣೇಶ್ ನಾಯಕ್, ಪ್ರತಿಜ್ಞಾ ರಂಜಿತ್, ಅಕ್ಷತಾ ಪ್ರಕಾಶ್ ಹಾಗೂ ಬಬಿತಾ ಆಚಾರ್ಯ ಪ್ರಸ್ತುತಪಡಿಸಲಿದ್ದಾರೆ. ವಾದ್ಯ ಸಂಗೀತದಲ್ಲಿ ಪುರುಷೋತ್ತಮ್ ಕೊಪ್ಪಲ್, ಸತ್ಯನಾರಾಯಣ ಐಲಾ, ಗಿರೀಶ್ ಪೆರ್ಲ, ಪ್ರಭಾಕರ ಮಲ್ಲ ಹಾಗೂ ಶರತ್ ಪೆರ್ಲ ಸಹಕರಿಸಲಿದ್ದಾರೆ.
ಸ್ವರ ಚಿನ್ನಾರಿ :
ಕಳೆದ 17 ವರುಷಗಳಿಂದ ಕಾಸರಗೋಡಿನ ಸಾಹಿತ್ಯಕ ಸಾಂಸ್ಕೃತಿಕ ಸಂಸ್ಥೆ ರಂಗಚಿನ್ನಾರಿ ತನ್ನ ಮಹಿಳಾ ಘಟಕ "ನಾರಿಚಿನ್ನಾರಿ" ಜೊತೆಗೆ ಈ ಮಣ್ಣಿನ ಅನೇಕ ಪ್ರತಿಭಾನ್ವಿತ ಗಾಯಕರು, ಹಾಡು ರಚನಾಕಾರರು, ವಾದ್ಯ ಸಂಗೀತ ಕಲಾವಿದರೆಲ್ಲರನ್ನು ಒಂದೆಡೆ ಸೇರಿಸಿ ಸುಗಮ ಸಂಗೀತ ಕ್ಷೇತ್ರಕ್ಕೆ ನಮ್ಮ ಮಣ್ಣಿನ ಕೊಡುಗೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ರಂಗಚಿನ್ನಾರಿ "ಸ್ವರಚಿನ್ನಾರಿ" ಎಂಬ ಘಟಕವನ್ನು ಹುಟ್ಟುಹಾಕಿದೆ. 'ಈ ನೆಲ ಈ ಸ್ವರ'ದ ಮೂಲಕ ಕಾರ್ಯಕ್ರಮ ಪ್ರಸ್ತುತಪಡಿಸಲಿದೆ.