ಲಖನೌ: ಉತ್ತರ ಪ್ರದೇಶದ ಬಹರೈಚ್‌ನ ಶಾಲೆಯೊಂದರ 9ನೇ ತರಗತಿ ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ 'ಭಾರತೀಯ ಮುಸ್ಲಿಂ ಭಯೋತ್ಪಾದಕತೆ' ಕುರಿತ ಪ್ರಶ್ನೆ ವಿವಾದಕ್ಕೆ ಕಾರಣವಾಗಿದೆ.
ಲಖನೌ: ಉತ್ತರ ಪ್ರದೇಶದ ಬಹರೈಚ್‌ನ ಶಾಲೆಯೊಂದರ 9ನೇ ತರಗತಿ ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ 'ಭಾರತೀಯ ಮುಸ್ಲಿಂ ಭಯೋತ್ಪಾದಕತೆ' ಕುರಿತ ಪ್ರಶ್ನೆ ವಿವಾದಕ್ಕೆ ಕಾರಣವಾಗಿದೆ.
ಮುಸ್ಲಿಂ ವಿದ್ಯಾರ್ಥಿ ಕೆನ್ನೆಗೆಹೊಡೆಯಲು ಶಿಕ್ಷಕಿಯೊಬ್ಬರು ಸೂಚಿಸಿದ್ದ ಘಟನೆ ಹಿಂದೆಯೇ ಈ ಬೆಳವಣಿಗೆ ನಡೆದಿದೆ.
ಅಲ್ಲದೆ, ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸಿದ್ದ ಹಿಂದಿ ವಿಷಯದ ಶಿಕ್ಷಕರನ್ನು ಶಾಲಾ ಆಡಳಿತವು ವಜಾ ಮಾಡಿದ್ದು, ಪರೀಕ್ಷೆಯನ್ನು ರದ್ದುಪಡಿಸಿದೆ. 'ಸಿದ್ಧಾಂತವೊಂದರ ಭಾಗವಾಗಿ ಭಾರತೀಯ ಮುಸ್ಲಿಂ ಭಯೋತ್ಪಾದಕತೆ, ಎಲ್‌ಇಟಿ, ತಾಲಿಬಾನ್ ಸಂಘಟನೆಗಳು ಭಾಗಿಯಾಗಿವೆ' ಎಂಬ ಸಾಲುಗಳು ಪ್ರಶ್ನೆಪತ್ರಿಕೆಯಲ್ಲಿದ್ದವು.
ಜಮ್ಮು ಮತ್ತು ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ದ್ವಿಪಕ್ಷೀಯ ಮಾತುಕತೆಯ ಜೊತೆಗೆ ಪಾಕಿಸ್ತಾನದ ಜೊತೆಗೆ ಯುದ್ಧ ನಡೆಸಲು ಭಾರತ ಸರ್ಕಾರ ಸಜ್ಜಾಗಬೇಕು ಎಂಬ ಪ್ಯಾರಾ ಕೂಡಾ ಅದರಲ್ಲಿತ್ತು.