HEALTH TIPS

ಕಳೆದ 9 ವರ್ಷಗಳಲ್ಲಿ ನಿರ್ಣಾಯಕ ನೀತಿಗಳು, ರಾಜಕೀಯ ಸ್ಥಿರತೆ, ಆರ್ಥಿಕತೆ ಹೊಸ ದಿಕ್ಕನ್ನು ಕಂಡಿದೆ: ಅಮಿತ್ ಶಾ

               ನವದೆಹಲಿ: ಕಳೆದ ಒಂಬತ್ತು ವರ್ಷಗಳಲ್ಲಿ ನಿರ್ಣಾಯಕ ನೀತಿಗಳು, ರಾಜಕೀಯ ಸ್ಥಿರತೆ, ಪ್ರಜಾಪ್ರಭುತ್ವ ಮತ್ತು ಟೀಮ್‌ವರ್ಕ್‌ಗೆ ಸಾಕ್ಷಿಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದ್ದಾರೆ.

                  ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಯ 118ನೇ ವಾರ್ಷಿಕ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, 2004 ರಿಂದ 2014 ರ ಅವಧಿಯು "ದೇಶವನ್ನೇ ತಲ್ಲಣಗೊಳಿಸಿತ್ತು", ಇದು ರಾಜಕೀಯ ಅಸ್ಥಿರತೆಯ "ಕೊನೆಯ ಅವಧಿ" ಎಂದಿದ್ದಾರೆ.

                ಕಳೆದ ಒಂಬತ್ತು ವರ್ಷಗಳ ಸಾಧನೆಯ ಫಲಿತಾಂಶ ಇಂದು ನಮ್ಮ ಕಣ್ಮುಂದೆ ಇದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶದ ಆರ್ಥಿಕತೆಯು ಹೊಸ ದಿಕ್ಕನ್ನು ಪಡೆದುಕೊಂಡಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

                   "ಕಳೆದ ಒಂಬತ್ತು ವರ್ಷಗಳಲ್ಲಿ ರಾಜಕೀಯ ಸ್ಥಿರತೆ ಮತ್ತು ನಿರ್ಣಾಯಕ ನೀತಿಗಳ ರಚನೆಯಾಗಿದೆ... ಈ ಅವಧಿಯಲ್ಲಿ ನಮ್ಮ GDP USD 2.03 ಟ್ರಿಲಿಯನ್‌ನಿಂದ USD 3.75 ಟ್ರಿಲಿಯನ್‌ಗೆ ಬೆಳೆದಿದೆ. ಇದು ಸುಮಾರು ದ್ವಿಗುಣವಾಗಿದೆ. 201314 ರಲ್ಲಿ ತಲಾ ಆದಾಯವು 68,000 ರೂ. ಇತ್ತು, ಈಗ ಅದು 1.80 ಲಕ್ಷಕ್ಕೆ ಹೆಚ್ಚಾಗಿದೆ’’ ಎಂದು ಕೇಂದ್ರ ಗೃಹ ಸಚಿವರು ತಿಳಿಸಿದ್ದಾರೆ.

                ಕಳೆದ ಒಂಬತ್ತು ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ಪ್ರತಿಯೊಂದು ಕ್ಷೇತ್ರದಲ್ಲೂ ಭಾರತವನ್ನು ಬದಲಾಯಿಸಲು ಪ್ರಯತ್ನಿಸಿದ್ದಾರೆ ಮತ್ತುಅದರಲ್ಲಿ ಅವರು ಯಶಸ್ವಿಯಾಗಿದ್ದಾರೆ ಎಂದು ಶಾ ಹೇಳಿದರು.

                G20 ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ ನಂತರ, ವ್ಯಾಪಾರ ಮತ್ತು ಕೈಗಾರಿಕೆಗಳಲ್ಲಿ ಮಾತ್ರವಲ್ಲದೆ ದೇಶದ ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ಶಕ್ತಿ ಬಂದಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries