ಕಾಸರಗೋಡು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಪ್ರತಿಭೆ ತೋರುವ ಮಕ್ಕಳಿಗೆ ಉಜ್ವಲಬಾಲ್ಯ ಪುರಸ್ಕಾರ ನೀಡಲಾಗುತ್ತದೆ. 2022ನೇ ವರ್ಷದಲ್ಲಿ ಕಲೆ, ಕ್ರೀಡೆ, ಸಾಹಿತ್ಯ, ವಿಜ್ಞಾನ, ಸಾಮಾಜಿಕ, ಪರಿಸರ ಸಂರಕ್ಷಣೆ, ಐ.ಟಿ ಕ್ಷೇತ್ರ, ಕೃಷಿ, ತ್ಯಾಜ್ಯ ಸಂಸ್ಕರಣಾ, ಪರೋಪಕಾರ, ಕ್ರಾಫ್ಟ್, ಶಿಲ್ಪಕಲೆ, ಅಪ್ರತಿಮ ಸಾಹಸಿಕ ಕಾರ್ಯಗಳು ಮುಂತಾದ ಯಾವುದಾದರೂ ಒಂದು ಕ್ಷೇತ್ರದಲ್ಲಿ ಸಾಮಥ್ರ್ಯ ಪ್ರದರ್ಶಿಸಿದ 6 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಮತ್ತು ವಿಕಲಚೇತನ ಮಕ್ಕಳಿಗೆ ಪ್ರತ್ಯೇಕ ಕ್ಯಾಟಗರಿಯಲ್ಲಿ ಪರಿಗಣಿಸಿ ಉಜ್ವಲಬಾಲ್ಯಂ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುವ ಜಿಲ್ಲಾ ಮಟ್ಟದ ಸಮಿತಿ ಆಯ್ಕೆ ಮಾಡುವ ನಾಲ್ಕು ಮಕ್ಕಳಿಗೆ 25,000 ರೂಪಾಯಿ ಹಾಗೂ ಪ್ರಶಸ್ತಿಪತ್ರ ಸೇರಿದ ಪುರಸ್ಕಾರ ನೀಡಲಾಗುತ್ತದೆ. ಅರ್ಜಿಯನ್ನು ಸೆಪ್ಟೆಂಬರ್ 15ರ ಮುಂಚಿತವಾಗಿ ಕಾಸರಗೋಡು ಸಿವಿಲ್‍ಸ್ಟೇಷನ್‍ನ ಕಾಸರಗೋಡು ಜಿಲ್ಲಾ ಮಕ್ಕಳ ಕಲ್ಯಾಣ ಕಛೇರಿಯಲ್ಲಿ ನೀಡಬೇಕು. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್ www.wcd.kerala.gov.in ಸಂದರ್ಶಿಸಬಹುದಾಘಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ (04994 256990)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.