ವಿಶ್ವಸಂಸ್ಥೆ: ಮಣಿಪುರ ಬೆಳವಣಿಗೆ ಕುರಿತು ವಿಶ್ವಸಂಸ್ಥೆಯ ಪರಿಣತರ ಹೇಳಿಕೆಗಳನ್ನು ಭಾರತವು ತಿರಸ್ಕರಿಸಿದೆ. 'ಇದು, ಅನಪೇಕ್ಷಿತ ಹಾಗೂ ದಾರಿತಪ್ಪಿಸುವ ಹೇಳಿಕೆ. ಈಶಾನ್ಯ ರಾಜ್ಯ ಸದ್ಯ ಶಾಂತಿಯುತವಾಗಿದೆ' ಎಂದು ಪ್ರತಿಪಾದಿಸಿದೆ.
ವಿಶ್ವಸಂಸ್ಥೆ: ಮಣಿಪುರ ಬೆಳವಣಿಗೆ ಕುರಿತು ವಿಶ್ವಸಂಸ್ಥೆಯ ಪರಿಣತರ ಹೇಳಿಕೆಗಳನ್ನು ಭಾರತವು ತಿರಸ್ಕರಿಸಿದೆ. 'ಇದು, ಅನಪೇಕ್ಷಿತ ಹಾಗೂ ದಾರಿತಪ್ಪಿಸುವ ಹೇಳಿಕೆ. ಈಶಾನ್ಯ ರಾಜ್ಯ ಸದ್ಯ ಶಾಂತಿಯುತವಾಗಿದೆ' ಎಂದು ಪ್ರತಿಪಾದಿಸಿದೆ.
ಮಾನವ ಹಕ್ಕು ಕುರಿತ ಹೈಕಮಿಷನರ್ ಕಚೇರಿಯ ವಿಶೇಷ ಪ್ರಕ್ರಿಯಾ ಶಾಖೆಗೆ ಸೋಮವಾರ ಭಾರತೀಯ ಹೈಕಮಿಷನ್ ಈ ಕುರಿತು ಮೌಖಿಕವಾಗಿ ಪ್ರತಿಕ್ರಿಯೆ ನೀಡಿದೆ.
'ನಮ್ಮ ಸರ್ಕಾರವು ಮಣಿಪುರವು ಒಳಗೊಂಡಂತೆ ದೇಶದ ಜನರ ಮಾನವ ಹಕ್ಕುಗಳ ರಕ್ಷಣೆಗೆ ಬದ್ಧವಾಗಿದೆ. ಈ ಸಂಬಂಧ ವಿಶ್ವಸಂಸ್ಥೆಯ ಪರಿಣತರು ನೀಡಲಾದ ಹೇಳಿಕೆಯನ್ನು ಅನಪೇಕ್ಷಿತ ಎಂದು ಭಾರತದ ಶಾಶ್ವತ ಮಿಷನ್ ತಿರಸ್ಕರಿಸುತ್ತದೆ' ಎಂದು ಕಟುವಾಗಿ ಪ್ರತಿಕ್ರಿಯಿಸಿದೆ.
'ಮಣಿಪುರದಲ್ಲಿ ಲೈಂಗಿಕ ಹಿಂಸಾಚಾರ, ನಿರಂತರ ದೌರ್ಜನ್ಯ, ಮನೆಗಳ ನಾಶ, ಬಲವಂತದ ತೆರವು ಕಾರ್ಯಾಚರಣೆ ಸೇರಿದಂತೆ ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ' ಎಂಬ ವರದಿಗಳ ಕುರಿತು ವಿಶ್ವಸಂಸ್ಥೆ ಪರಿಣತರ ಸಮೂಹ ಆತಂಕ ವ್ಯಕ್ತಪಡಿಸಿದ ಬಳಿಕ ಭಾರತ ಈ ಪ್ರತಿಕ್ರಿಯೆ ನೀಡಿದೆ.