ಕಾಸರಗೋಡು: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಇಂದು ಕಾಸರಗೋಡಲ್ಲಿ ಭಾಗವಹಿಸಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕೋಪಗೊಂಡ ಘಟನೆ ನಡೆದಿದ್ದು, ಬಳಿಕ ಅವರು ವಿವರಣೆ ನೀಡಿದ್ದಾರೆ.
ಮಾಧ್ಯಮಗಳ ಸೃಷ್ಟಿಯೇ ಕಗ್ಗಂಟಾಯಿತು ಎಂಬುದು ಮುಖ್ಯಮಂತ್ರಿಗಳು ತಿಳಿಸಿದರು. ಇದರಿಂದ ಬೇಸರವಾಗಲೀ, ಕೋಪವಾಗಲೀ ಆಗದೇ ತನಗಿರುವ ಕಷ್ಟವನ್ನು ಹೇಳಿಕೊಂಡೆ ಎಂದು ವಿವರಣೆ ನೀಡಿರುವರು. ಈ ಘಟನೆಯನ್ನು ಮುಖ್ಯಮಂತ್ರಿಗಳು ಮಾಧ್ಯಮಗಳ ಮೂಲಕ ಸಮರ್ಥಿಸಿಕೊಂಡರು.
ಸಾರ್ವಜನಿಕ ಸಮಾರಂಭದಲ್ಲಿ ಭಾಷಣ ಅರ್ಧದಲ್ಲಿ ಮೊಟಕುಗೊಳಿಸಿ ಬಳಿಕ ಪಿಣರಾಯಿ ವಿಜಯನ್ ಕೂಗಾಡುತ್ತಾ ಹೊರಟು ಹೋದರು. ಕಾಸರಗೋಡು ಬೇಡಗಂನ ಸೇವಾ ಸಹಕಾರಿ ಬ್ಯಾಂಕ್ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಭಾಗವಹಿಸಿದ್ದರು. ಅವರು ತಮ್ಮ ಭಾಷಣವನ್ನು ಕೊನೆಗೊಳಿಸುತ್ತಿರುವುದಾಗಿ ಹೇಳಿ ಹೊರನಡೆದರು.
ಮುಖ್ಯಮಂತ್ರಿಯವರು ಭಾಷಣ ಮುಗಿಸುತ್ತಿರುವುದಾಗಿ ಹೇಳಿ ಮತ್ತೆ ಏನೋ ಹೇಳಲು ಬಾಕಿಯಿದೆ ಎಂದು ಸಭೆಯಿಂದ ಮಾತುಗಳು ಕೇಳಿಬಂತು. ಇದರಿಂದ ಕೆರಳಿದ ಮುಖ್ಯಮಂತ್ರಿ ಕಾರ್ಯಕ್ರಮ ಮುಗಿಯುವ ಮುನ್ನವೇ ಕಾರು ಹತ್ತಿದರು.
ಧ್ವನಿ ಕೇಳುತ್ತಿಲ್ಲ ಎಂದು ಮುಖ್ಯಮಂತ್ರಿಯ ಭಾಷಣದ ಮಧ್ಯೆ ಸಭೆಯಿಂದ ಧ್ವನಿ ಕೇಳಿಬಂತು. ಸಂಘಟಕರೊಬ್ಬರು ಅವರನ್ನು ತಡೆದ ನಂತರ ಘೋಷಣೆಗಳು ಕೇಳಿಬಂತು. ನಂತರ, ಇದು ಸರಿಯಾದ ಕ್ರಮವಲ್ಲ ಎಂದು ಪಿಣರಾಯಿ ಪೀಠದ ಹಿಂದಿನ ವ್ಯಕ್ತಿಗೆ ಹೇಳಿದರು. ತಕ್ಷಣ ಮುಖ್ಯಮಂತ್ರಿಗಳು ಕಾರು ಹತ್ತಿ ಹೊರಟರು.