ಎರ್ನಾಕುಳಂ: ಜನರಲ್ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರ ಮೇಲೆ ಮಹಿಳಾ ವೈದ್ಯೆಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. 2019ರಲ್ಲಿ ಹೌಸ್ ಸರ್ಜರಿ ಮಾಡುವಾಗ ಹಿರಿಯ ವೈದ್ಯರು ತಮ್ಮ ಮುಖಕ್ಕೆ ಬಲವಂತವಾಗಿ ಮುತ್ತಿಟ್ಟಿದ್ದಾರೆ ಎಂದು ಮಹಿಳಾ ವೈದ್ಯೆ ಆರೋಪಿಸಿದ್ದಾರೆ. ಫೇಸ್ ಬುಕ್ ಪೋಸ್ಟ್ ಮೂಲಕ ಈ ಆರೋಪ ಮಾಡಲಾಗಿದೆ.
ಈ ಕುರಿತು ಮಹಿಳಾ ವೈದ್ಯರಿಂದ ಮಾಹಿತಿ ಪಡೆದು ಆರೋಗ್ಯ ಇಲಾಖೆ ನಿರ್ದೇಶಕರಿಗೆ ದೂರು ಸಲ್ಲಿಸಲಾಗಿದೆ ಎಂದು ಆಸ್ಪತ್ರೆಯ ಅಧೀಕ್ಷಕರು ತಿಳಿಸಿದ್ದಾರೆ. ವೈದ್ಯರ ದೂರನ್ನು ಪೋಲೀಸರಿಗೆ ರವಾನಿಸಲಾಗುವುದು ಎಂದು ಅಧೀಕ್ಷಕರು ತಿಳಿಸಿದ್ದಾರೆ.
ಮರುದಿನವೇ ಹಿರಿಯ ಅಧಿಕಾರಿಗಳಿಗೆ ಹಿರಿಯ ವೈದ್ಯರ ವಿರುದ್ಧ ದೂರು ನೀಡಿದ್ದೆ ಎಂದು ಮಹಿಳಾ ವೈದ್ಯೆಯೂ ಹೇಳುತ್ತಾರೆ. ಆದರೆ ಯಾವುದೇ ಫಲ ಸಿಗಲಿಲ್ಲ. ಅವಮಾನಿಸಿದ ವೈದ್ಯರು ಈಗ ಜನರಲ್ ಆಸ್ಪತ್ರೆಯಿಂದ ಸ್ಥಳಾಂತರಗೊಂಡಿದ್ದಾರೆ ಎಂದು ವೈದ್ಯೆ ವಿವರಣೆ ನೀಡಿದ್ದಾರೆ.