ಚೆನ್ನೈ: ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ಮಾತನಾಡಿದ ಕಾರಣಕ್ಕೆ ಈ ಚಿಕ್ಕ ಹುಡುಗನನ್ನು (ಉದಯನಿಧಿ) ಬೇಟೆಯಾಡಲಾಗುತ್ತಿದೆ ಎಂದು ನಟ, ರಾಜಕಾರಣಿ ಕಮಲ್ ಹಾಸನ್ ಹೇಳಿದ್ದಾರೆ.
ಚೆನ್ನೈ: ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ಮಾತನಾಡಿದ ಕಾರಣಕ್ಕೆ ಈ ಚಿಕ್ಕ ಹುಡುಗನನ್ನು (ಉದಯನಿಧಿ) ಬೇಟೆಯಾಡಲಾಗುತ್ತಿದೆ ಎಂದು ನಟ, ರಾಜಕಾರಣಿ ಕಮಲ್ ಹಾಸನ್ ಹೇಳಿದ್ದಾರೆ.
ಶನಿವಾರ ಬೆಳಗ್ಗೆ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಾವು ಸನಾತನ ಧರ್ಮದ ಬಗ್ಗೆ ಕೇಳಿದ್ದು ಪೆರಿಯಾರ್ ಅವರಿಂದ. ಇಡೀ ರಾಜ್ಯ ಪೆರಿಯಾರ್ ಅವರನ್ನು ತಮ್ಮವರೆಂದು ಹೇಳಬಹುದು ಆದರೆ ಯಾವುದೇ ರಾಜಕೀಯ ಪಕ್ಷಗಳು ಪೆರಿಯಾರ್ ಅವರನ್ನು ತಮ್ಮವರೆಂದು ಹೇಳಿಕೊಳ್ಳುವಂತಿಲ್ಲ ಎಂದು ಕಮಲ್ ಹಾಸನ್ ಹೇಳಿದರು.
ಪರಿಯಾರ್ ಅವರು ಆರಂಭದಲ್ಲಿ ದೇವಾಲಯದೊಂದರಲ್ಲಿ ಪೂಜೆ ಮಾಡುತ್ತಿದ್ದರು. ನಂತರ ಜನಸೇವೆ ಮಾಡುವುದೇ ದೊಡ್ಡ ಸೇವೆ ಎಂದು ಅರಿತು ಬದುಕಿದರು ಎಂದು ಕಮಲ್ ಹಾಸನ್ ಹೇಳಿದರು.